newsics.com
ಬೆಂಗಳೂರು: ಬಿಗ್ ಬಾಸ್ ಸೀಸನ್ 8 ಮುಗಿಯುತ್ತಿದ್ದಂತೆ ಬಿಡದಿಯ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್ ಕಾರ್ಯಕ್ರಮ ಆರಂಭವಾಗುತ್ತಿದೆ.
15 ಮಂದಿ ಸೆಲೆಬ್ರಿಟಿಗಳು 6 ದಿನಗಳ ಕಾಲ ಮನೆಯಲ್ಲಿ ಇರಲಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯ ನಟ, ನಟಿಯರು ಸೇರಿದಂತೆ ಕಳೆದ 7 ಸೀಸನ್ ಗಳ ಸ್ಪರ್ಧಿಗಳೂ ಇರಲಿದ್ದಾರೆ.
ಈಗಾಗಲೇ ಇದರ ಪ್ರೋಮೋ ರಿಲೀಸ್ ಆಗಿದ್ದು, ವೀಕ್ಷಕರು ಹುಬ್ಬೇರಿಸಿದ್ದಾರೆ.
ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್ ನಲ್ಲಿ ನಿರಂಜನ್ ದೇಶಪಾಂಡೆ, ಅಕುಲ್ ಬಾಲಾಜಿ, ನಯನಾ ನಾಗರಾಜ್, ಹೃತ್ವಿಕ್ ಮಠದ, ಅಭಿನವ್ ವಿಶ್ವನಾಥನ್, ಚಂದನಾ ಅನಂತಕೃಷ್ಣ, ಕಿರಣ್ ರಾಜ್, ಧನುಷ್, ಭವ್ಯಾ ಗೌಡ, ತ್ರಿವಿಕ್ರಮ್, ಗಗನ್ ಚಿನ್ನಪ್ಪ, ಪ್ರೇರಣಾ ಹಾಗೂ ಕೌಸ್ತುಬಾ ಮಣಿ ಇರಲಿದ್ದಾರೆ. ಈಗಾಗಲೇ ಈ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆ ಸೇರಿಕೊಂಡಿದ್ದು, ಇದೇ ಶನಿವಾರ ಹಾಗೂ ಭಾನುವಾರ ಸಂಜೆ 4ಕ್ಕೆ ಚಾಲನೆ ಸಿಗಲಿದೆ.
ಸುದೀಪ್ ಕೂಡ ಒಂದು ದಿನ ಬಂದು ಕಾರ್ಯಕ್ರಮ ನಡೆಸಿಕೊಡುತ್ತಾರೆ ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್: ಕಿರುತೆರೆಯ 15 ತಾರೆಯರ ಹೊಸ ಜರ್ನಿ
Follow Us