newsics.com
ಬೆಂಗಳೂರು: ಕೊರೋನಾ ಮಹಾಮಾರಿಯಿಂದಾಗಿ ಹೋಟೆಲ್ ಗಳಲ್ಲಿ ಸ್ಥಗಿತಗೊಂಡಿದ್ದ ಹುಟ್ಟುಹಬ್ಬ ಆಚರಣೆಗೆ ಮತ್ತೆ ಚಾಲನೆ ದೊರೆತಿದೆ.
ಬೆಂಗಳೂರಿನ ಸ್ಟಾರ್ ಹೋಟೆಲ್ ಗಳ ಬಹು ಮುಖ್ಯ ಆದಾಯ ಮಾರ್ಗಗಳಲ್ಲಿ ಹುಟ್ಟುಹಬ್ಬ ಆಚರಣೆ ಒಂದಾಗಿದೆ. ಬೆಂಗಳೂರಿನ ಸಿರಿವಂತರಲ್ಲಿ ಅತ್ಯಧಿಕ ಸಿರಿವಂತರು ಪೈಪೋಟಿಗೆ ಬಿದ್ದವರಂತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದು ಸಾಮಾನ್ಯ.
ಮೇಲ್ನೋಟಕ್ಕೆ ಇದು ದುಂದುವೆಚ್ಚ ಅನಿಸಿದರೂ ಇದರ ಜತೆಗೆ ಇದು ಉದ್ಯೋಗ ಸೃಷ್ಟಿಗೆ ಪೂರಕವಾಗಿದೆ.
ಕೆಲವು ಸೆಲೆಬ್ರಿಟಿಗಳು ದಿನಕ್ಕೆ ಮೂರು ನಾಲ್ಕು ಹುಟ್ಟುಹಬ್ಬ ಸಂಭ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೊರೋನಾ ಮಾರ್ಗಸೂಚಿ ಪಾಲಿಸಿ ಹೋಟೆಲ್ ಗಳಲ್ಲಿ ಹುಟ್ಟುಹಬ್ಬ ಆಚರಿಸಲು ಅನುಮತಿ ನೀಡಲಾಗಿದೆ.