Wednesday, November 30, 2022

ಬಾಲಿವುಡ್ ತಾರೆ ನೀನಾ ಗುಪ್ತಾ ಆತ್ಮಚರಿತ್ರೆ ಬಿಡುಗಡೆ: ಬಾಳಿನ ಏಳು ಬೀಳಿನ ಕತೆ ಬಿಚ್ಚಿಟ್ಟ ನಟಿ

Follow Us

newsics.com
ಮುಂಬೈ: ಬಾಲಿವುಡ್ ನಟಿ ನೀನಾ ಗುಪ್ತಾ ಆತ್ಮಚರಿತ್ರೆ ‘ಸಚ್‌ ಕಹೂಂ ತೋ ಬಿಡುಗಡೆಯಾಗಿದೆ. ಇದರಲ್ಲಿ ನೀನಾ ತನ್ನ ಬದುಕಿನ ಏಳು ಬೀಳಿನ ಕತೆಗಳನ್ನು ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ.
ನನ್ನ ತುಂಬು ಯೌವ್ವನದ ದಿನಗಳನ್ನು ಒಂಟಿಯಾಗಿಯೇ ಕಳೆದಿದ್ದೇನೆ. ಬಾಲಿವುಡ್‌ಗೆ ಕಾಲಿರಿಸಿದ ನಂತರ ಚಿಕ್ಕ ಪುಟ್ಟ ಅಫೇರ್‌ಗಳಾದವೇ ಹೊರತು ಬಾಂಧವ್ಯಗಳು ಆಗಲಿಲ್ಲ. ತಾನು ಏಕಾಂಗಿಯಾಗಿಯೇ ಬಾಳಿನ ಬಹುಪಾಲು ಬದುಕಬೇಕಾಯಿತು.
ಹಿಂದಿನ ,ವೆಸ್ಟ್ ಇಂಡೀಸ್‌ನ ಮಾಜಿ ಖ್ಯಾತ ಬ್ಯಾಟ್ಸ್‌ಮನ್‌ ವಿವಿಯನ್ ರಿಚರ್ಡ್ಸ್ ಜೊತೆಗಿನ ಸಂಬಂಧದ ಕುರಿತು ಹೇಳಿದ ನೀನಾ ತಾನು ತನ್ನ ಜೀವನವನ್ನು ತನ್ನ ಇಚ್ಛೆಯಂತೆ ಬಾಳಲು ಸಾಧ್ಯವಾಗಲಿಲ್ಲ. ನಾನು ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಂಡು ಮುಂದೆ ಸಾಗಿದೆ. ವಿವಿಯನ್ ದೂರವಿದ್ದರಿಂದ ಅವನನ್ನು ಭೇಟಿಯಾಗುವುದು ತುಂಬಾ ಕಷ್ಟವಾಗುತ್ತಿತ್ತು. ಸಾಮಾನ್ಯ ಜನರಂತೆ ನನಗೂ ಗಂಡ , ಮಕ್ಕಳು , ಅತ್ತೆ ಮಾವ  ತುಂಬು  ಕುಟುಂಬ ಬೇಕಾಗಿತ್ತು. ಆದರೆ ಅದು ನನ್ನ ಹಣೆಬರಹದಲ್ಲಿ ಇರಲಿಲ್ಲ. ಆದ್ದರಿಂದ ಇಂತಹ ಸಂಬಂಧಗಳನ್ನು ಕಂಡಾಗ ಅಸೂಯೆ ಉಂಟಾಗುತ್ತದೆ ಎಂದು ಮನದ ತುಮುಲಗಳನ್ನು ಹೇಳಿಕೊಂಡಿದ್ದಾರೆ. ನಾನು,  ಪುತ್ರಿ ಮಸಾಬಾಗೆ ಗರ್ಭವತಿಯಾಗಿದ್ದಾಗ ಸತೀಶ್ ಕೌಶಿಕ್ ಬಂದು ಚಿಂತೆ ಮಾಡಬೇಡ. ಮಗುವಿನ ಚರ್ಮ ಗಾಢಬಣ್ಣವಾಗಿದ್ದರೂ ಅದು ನನ್ನದು ಎಂದು ಹೇಳು. ನಾವಿಬ್ಬರೂ ‌ಮದುವೆಯಾಗೋಣ ಯಾರಿಗೂ ಅನುಮಾನ ಬರುವುದಿಲ್ಲ ಎಂದಿದ್ದರು ಎಂದು ನೀನಾ ಗುಪ್ತಾ ಬರೆದುಕೊಂಡಿದ್ದಾರೆ. ನೀನಾ ಮದುವೆಯಾಗದೆ ಮಗುವಿನ ತಾಯಿಯಾಗಿ, ಧೃತಿಗೆಡದೆ ಆಕೆಯನ್ನು ಬೆಳೆಸಿ, ದೇಶದ ಖ್ಯಾತ ಪ್ಯಾಷನ್ ಡಿಸೈನರ್ ಆಗಿ ಮಾಡಿದ್ದಾರೆ.

 

ರಾಜ್ಯದಲ್ಲಿ 5,041 ಮಂದಿಗೆ ಸೋಂಕು, 14,785 ಸೋಂಕಿತರು ಗುಣಮುಖ, 115 ಸಾವು

ಮತ್ತಷ್ಟು ಸುದ್ದಿಗಳು

vertical

Latest News

ಕೇಂದ್ರ ಜಲ ಆಯೋಗದ ಅಧ್ಯಕ್ಷರಾಗಿ ಚಂದ್ರಶೇಖರ್ ಅಯ್ಯರ್

newsics.com ನವದೆಹಲಿ: ಜಲ ತಜ್ಞ ಚಂದ್ರಶೇಖರ್ ಅಯ್ಯರ್ ಅವರು ‘ಕೇಂದ್ರ ಜಲ ಆಯೋಗದ’  ಮುಂದಿನ ಅಧ್ಯಕ್ಷರಾಗಿ ನಿಯುಕ್ತಿಯಾಗಿದ್ದಾರೆ. ಗುರುವಾರ ಡಿಸೆಂಬರ್ 1 ರಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಚಂದ್ರಶೇಖರ್...

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ ವಾಹನ ಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...
- Advertisement -
error: Content is protected !!