newsics.com
ಚಿತ್ರದ ಸ್ಟಾರ್ ರಾಮ್ ಚರಣ್ ಇದೀಗ ‘ಉಪ್ಪೇನ’ ನಿರ್ದೇಶಕನ ಜೊತೆ ಕೈಜೋಡಿಸಿದ್ದಾರೆ. ಹೊಸ ಪ್ರಾಜೆಕ್ಟ್’ಗೆ ರಾಮ್ ಚರಣ್ ಗೆ ಜೋಡಿಯಾಗಿ ಸ್ಟಾರ್ ನಟಿಯ ಪುತ್ರಿ ಟಾಲಿವುಡ್’ಗೆ ಪರಿಚಿತರಾಗುತ್ತಿದ್ದಾರೆ.
ಗೇಮ್ ಜೇಂಜರ್ ಸಿನಿಮಾದಲ್ಲಿ ರಾಮ್ ಚರಣ್ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಉಪ್ಪೇನ ಡೈರೆಕ್ಟರ್ ಬುಚ್ಚಿಬಾಬು ಹೊಸ ಚಿತ್ರದ ಕಥೆ ಕೇಳಿ, ಚರಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಬಾಲಿವುಡ್ ನಟಿ ರವೀನಾ ಟಂಡನ್ ಪುತ್ರಿ ರಾಶಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಅಪ್‌ಡೇಟ್ ಹೊರಬಿದ್ದಿಲ್ಲ. ರವೀನಾರಂತೆಯೇ ರಾಶಾ ಕೂಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳುತ್ತಾರಾ? ಎಂದು ಕಾಯಬೇಕಿದೆ.
ಬಾಲ್ಯದಲ್ಲೇ ಅಶ್ಲೀಲ ವೆಬ್ ಸೈಟ್ ಗಳಲ್ಲಿ ಕಾಣಿಸಿಕೊಂಡಿದ್ದೆ ಎಂದ ಜಾಹ್ನವಿ ಕಪೂರ್