Monday, March 1, 2021

ವಿಕ್ಕಿ ಕೌಶಲ್, ಆಯುಷ್ಮಾನ್ ಖುರಾನಾಗೆ ಅತ್ಯುತ್ತಮ ನಟ ಪ್ರಶಸ್ತಿ

  • ಕೀರ್ತಿ ಸುರೇಶ್ ಅತ್ಯುತ್ತಮ ನಾಯಕಿ
  • ಅತ್ಯುತ್ತಮ ಸಾಹಿತ್ಯ: ನಾತಿ ಚರಾಮಿ (ಕನ್ನಡ)
  • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ

ದೆಹಲಿ: 2019 ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಇಬ್ಬರು ಹಂಚಿಕೊಂಡಿದ್ದಾರೆ.
ಉರಿ- ದಿ ಸರ್ಜಿಕಲ್ ಸ್ಟ್ರೈಕ್ ನಟ ವಿಕ್ಕಿ ಕೌಶಲ್ ಮತ್ತು ಅಂದಾಧನ್ ಸಿನಿಮಾ ನಾಯಕ ನಟ ಆಯುಷ್ಮಾನ್ ಖುರಾನಾ ಪ್ರಶಸ್ತಿ ಪುರಸ್ಕೃತರು. ಮಹಾನಟಿ ಸಿನಿಮಾದಲ್ಲಿನ ಅಭಿನಯಕ್ಕೆ ಟಾಲಿವುಡ್​ನ ಕೀರ್ತಿ ಸುರೇಶ್ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದಿದ್ದಾರೆ. ಸಾಮಾಜಿಕ ಕಳಕಳಿಯ ಸಿನಿಮಾಗಳ ಮೂಲಕ ಮಿಂಚುತ್ತಿರುವ ಅಕ್ಷಯ್ ಕುಮಾರ್​, ಪ್ಯಾಡ್​​ಮ್ಯಾನ್​ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಸುರೇಶ್ ಸಿಕ್ರಿ ‘ಬದಾಯಿ ಹೋ’ ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.
ದೆಹಲಿಯ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಪ್ರಶಸ್ತಿ ವಿತರಿಸಿದರು.

66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರು:
ಅತ್ಯುತ್ತಮ ಹಿಂದಿ ಸಿನಿಮಾ: ಅಂದಾಧನ್
ಬೆಸ್ಟ್​ ಜನಪ್ಪುರಿಯ ಸಿನಿಮಾ: ಬದಾಯಿ ಹೋ
ಅತ್ಯುತ್ತಮ ನಾಯಕ: ಆಯುಷ್ಮಾನ್ ಖುರಾನಾ(ಅಂದಾಧನ್) ಮತ್ತು ವಿಕ್ಕಿ ಕೌಶಲ್ (ಉರಿ)
ಅತ್ಯುತ್ತಮ ನಾಯಕಿ: ಕೀರ್ತಿ ಸುರೇಶ್ (ಮಹಾನಟಿ-ತೆಲುಗು)
ಅತ್ಯುತ್ತಮ ಪೋಷಕ ನಟ: ಶಿವಾನಂದ್​ ಕಿರ್ಕಿರಿ (ಚುಂಬಕ್)
ಅತ್ಯುತ್ತಮ ಪೋಷಕ ನಟಿ: ಸುರೇಖಾ ಸಿಕ್ರಿ (ಬದಾಯಿ ಹೋ)
ಅತ್ಯುತ್ತಮ ನಿರ್ದೇಶಕ: ಆದಿತ್ಯ ಧರ್ (ಉರಿ- ದಿ ಸರ್ಜಿಕಲ್ ಸ್ಟ್ರೈಕ್)
ಅತ್ಯುತ್ತಮ ಚೊಚ್ಚಲ ನಿರ್ದೇಶಕ: ಸುಧಾಕರ್ ರೆಡ್ಡಿ ಯಾಕಂಟಿ, ಸಿನಿಮಾ-ನಾಲ್ (ಮರಾಠಿ)
ಅತ್ಯುತ್ತಮ ಹಿನ್ನೆಲೆ ಗಾಯಕ: ಅರ್ಜಿತ್ ಸಿಂಗ್(ಪದ್ಮಾವತ್)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಬಿಂದು ಮಾಲಿನಿ
ಅತ್ಯುತ್ತಮ ಹಾಡು: ಬಿಂತೆ ದಿಲ್ (ಪದ್ಮಾವತ್)
ಅತ್ಯುತ್ತಮ ಸಂಗೀತ ನಿರ್ದೇಶಕ: ಸಂಜಯ್ ಲೀಲಾ ಬನ್ಸಾಲಿ(ಪದ್ಮಾವತ್)
ಅತ್ಯುತ್ತಮ ಹಿನ್ನೆಲೆ ಸಂಗೀತ: ಸಸ್ವತ್ ಸಚ್​ದೇವ (ಉರಿ)
ಅತ್ಯುತ್ತಮ ಧ್ವನಿ ವಿನ್ಯಾಸ: ಬಿಶ್ವದೀಪ್ ದೀಪಕ್(ಉರಿ)
ಅತ್ಯುತ್ತಮ ಸಿನಿ ವಿಮರ್ಶಕ: ಬ್ಲೇಯ್ ಜಾನಿ ಮತ್ತು ಅನಂತ್ ವಿಜಯ್
ಅತ್ಯುತ್ತಮ ಸಾಹಿತ್ಯ: ನಾತಿ ಚರಾಮಿ (ಕನ್ನಡ)
ಅತ್ಯುತ್ತಮ ಸಿನಿಮಾಸ್ನೇಹಿ ರಾಜ್ಯ: ಉತ್ತರಾಖಂಡ
ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: ಕೆಜಿಎಫ್ ಮತ್ತು ಅವೆ
ಬೆಸ್ಟ್ ಕೊರಿಯೋಗ್ರಾಫರ್: ಕೃತಿ ಮಹೇಶ್ ಮಧ್ಯ(ಪದ್ಮಾವತ್-ಗೂಮರ್ ಹಾಡು)
ಬೆಸ್ಟ್ ಡೈಲಾಗ್ಸ್​: ಡೇಟ್(ಬೆಂಗಾಲಿ)
ವಿಶೇಷ ಉಲ್ಲೇಖ ಪ್ರಶಸ್ತಿ: ಗ್ರೇಟ್ ಹಂಟರ್-ಸಾಗರ್ ಪುರಾಣಿಕ್
ಅತ್ಯುತ್ತಮ ನಿರೂಪಣೆ: ದ ಸ್ಟೇಷನ್ ಆಫ್ ಕಲರ್
ಅತ್ಯುತ್ತಮ ಧ್ವನಿ: ದೀಪಕ್ ಅಗ್ನಿಹೋತ್ರಿ, ಊರ್ವಿಜಾ ಉಪಾಧ್ಯಾಯ
ಅತ್ಯುತ್ತಮ ಸಂಗೀತ ಚಿತ್ರ: ಜ್ಯೋತಿ, ನಿರ್ದೇಶಕ-ಕೇದಾರ್ ದಿವೇಕರ್
ಅತ್ಯುತ್ತಮ ಸಿನಿಮಾಟೋಗ್ರಫಿ: ದ ಸೀಕ್ರೇಟ್ ಲೈಫ್ ಆಫ್ ಫ್ರಾಗ್ಸ್​ (ಅಜಯ್ ಬೇಡಿ ಮತ್ತು ವಿಜಯ್ ಬೇಡಿ)
ಅತ್ಯುತ್ತಮ ಸಾಮಾಜಿಕ ನ್ಯಾಯ ಚಿತ್ರ: ವೈ ಮೀ (ಹರೀಶ್ ಷಾ)
ಅತ್ಯುತ್ತಮ ತನಿಖಾ ಚಿತ್ರ: ಅಮೋಲಿ
ಅತ್ಯುತ್ತಮ ಕ್ರೀಡಾ ಚಿತ್ರ: ಸ್ವಿಮ್ಮಿಂಗ್ ಥ್ರೂ ದ ಡಾರ್ಕ್​ನೆಸ್
ಅತ್ಯುತ್ತಮ ಶೈಕ್ಷಣಿಕ ಚಿತ್ರ: ಸರಳ ವಿರಳ
ಅತ್ಯುತ್ತಮ ಪರಿಸರ ಚಿತ್ರ: ವರ್ಲ್ಡ್​ ಮೋಸ್ಟ್​ ಫೇಮಸ್ ಟೈಗರ್
ಅತ್ಯುತ್ತಮ ಪ್ರಚಾರ ಚಿತ್ರ: ರಿ ಡಿಸ್ಕವರಿಂಗ್ ಜಾಜಮ್
ಅತ್ಯುತ್ತಮ ಕಲಾ ಮತ್ತು ಸಾಂಸ್ಕೃತಿಕ ಚಿತ್ರ: ಬುಂಕಾರ್ಸ್​: ದ ಲಾಸ್ಟ್ ಆಫ್ ದ ವಾರಾಣಸಿ ವೀವರ್ಸ್​
ಬೆಸ್ಟ್ ನಾನ್​ ಫೀಚರ್ಡ್​ ಸಿನಿಮಾ: ಸನ್​ ರೈಸ್​

ಮತ್ತಷ್ಟು ಸುದ್ದಿಗಳು

Latest News

ಹಣದ ಮಳೆಯ ಭರವಸೆ: ಐದು ಆರೋಪಿಗಳ ಬಂಧನ

newsics.com ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಹಣದ ಮಳೆ ಭರವಸೆ ನೀಡಿ ಬಾಲಕಿಯೊಬ್ಬಳನ್ನು ಪೂಜೆಯ ಹೆಸರಿನಲ್ಲಿ ವಿವಸ್ತ್ರಗೊಳಿಸಲು ಯತ್ನ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಮಾಟ ಮಂತ್ರದ ಮೂಲಕ...

ಕೊರೋನಾ ಲಸಿಕೆ ಪಡೆದ ಪ್ರಧಾನಿ ಮೋದಿ

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ. ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಪ್ರಧಾನಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಮೂಲಕ ದೇಶದ ಜನರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕೊರೋನಾ ತಡೆ ಲಸಿಕೆ...

ಮ್ಯಾನ್ಮಾರ್ ನಲ್ಲಿ ಪ್ರತಿಭಟನಾಕಾರರ ಮೇಲೆ ಗೋಲಿಬಾರ್: 18 ಮಂದಿ ಸಾವು

newsics.com ವಾಷಿಂಗ್ಟನ್: ಮ್ಯಾನ್ಮಾರ್ ನಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸೇನೆ ಗುಂಡು ಹಾರಿಸಿದೆ. ಪ್ರತಿಭಟನೆ ಹತ್ತಿಕ್ಕಲಾಗುವುದು ಎಂದು ಘೋಷಿಸಿದ ಬೆನ್ನ ಹಿಂದೆಯೇ ಯೋಧರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದಾರೆ. ಯೋಧರು...
- Advertisement -
error: Content is protected !!