newsics.com
ಮುಂಬೈ: ತಮ್ಮ ಧಾಕಡ್ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿರುವ ನಟಿ ಕಂಗನಾ ರಾಣಾವತ್ ತಮ್ಮ ಹೇಳಿಕೆಯೊಂದರ ಮೂಲಕ ಮತ್ತೆ ವಿವಾದಕ್ಕೆ ಕಾರಣವಾಗಿದ್ದಾರೆ.
ಆರಂಭದಿಂದಲೂ ನೇರ ಮಾತು ಹಾಗೂ ಖಡಕ್ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿರುವ ಕಂಗನಾ, ಪ್ರಶ್ನೆಯೊಂದಕ್ಕೆ ‘ನಾನು ಯಾವ ಬಾಲಿವುಡ್ ಮಂದಿಯನ್ನು ಮನೆಗೆ ಆಹ್ವಾನಿಸುವುದಿಲ್ಲ. ಅವರಿಗೆ ನನ್ನ ಮನೆಯಲ್ಲಿ ಉಪಚಾರ ಮಾಡಿಸಿಕೊಳ್ಳುವ ಯೋಗ್ಯತೆ ಇಲ್ಲ, ನನಗೆ ಬಾಲಿವುಡ್‌ನಲ್ಲಿ ಯಾವುದೇ ಫ್ರೆಂಡ್ಸ್ ಇಲ್ಲ ಹಾಗೂ ನನಗೆ ಸ್ನೇಹಿತರಾಗುವ ಯೋಗ್ಯತೆ ಅವರಿಗಿಲ್ಲ’ ಎಂದು ಉತ್ತರಿಸಿದ್ದು ಈಗ ವಿವಾದ ಸೃಷ್ಟಿಸಿದೆ.
ಈ ಹಿಂದೆ ನೇಪೋಟಿಸಂ ಸೇರಿದಂತೆ ಹಲವು ವಿಚಾರಗಳ ವಿರುದ್ಧ ಧ್ವನಿಯೆತ್ತಿ ಬಾಲಿವುಡ್ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ‘ನನ್ನ ಕೆಲಸಗಳಿಂದ ಅವರಿಗೆ ಅಭದ್ರತೆ ಉಂಟಾಗುವ ಕಾರಣ ಅವರು ನನ್ನ ಕೆಲಸಗಳನ್ನು ಹೊಗಳುವುದಿಲ್ಲ’ ಎಂಬ ಹೇಳಿಕೆಯನ್ನೂ ಕಂಗನಾ ನೀಡಿದ್ದರು.
ನನ್ನ ಉಪಚಾರ ಪಡೆವ ಯೋಗ್ಯತೆ ಬಾಲಿವುಡ್ ಮಂದಿಗಿಲ್ಲ: ಕಂಗನಾ ರಣಾವತ್
Follow Us