Tuesday, July 5, 2022

ಎನ್ಆರ್‌ಐ ಉದ್ಯಮಿಯನ್ನು ವರಿಸಿದ ಬಾಲಿವುಡ್ ಗಾಯಕಿ, 3 ಮಕ್ಕಳ ತಾಯಿ ಕನಿಕಾ ಕಪೂರ್

Follow Us

newsics.com
ಮೀಟ್ ಬ್ರೋಸ್ ಕಂಪೋಸ್ ಮಾಡಿದ ಬೇಬಿ ಡಾಲ್ ಹಾಡಿನ ಮೂಲಕ ಭಾರತದಲ್ಲಿ ಖ್ಯಾತಿ ಗಳಿಸಿದ ಜನಪ್ರಿಯ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಶುಕ್ರವಾರ ಅನಿವಾಸಿ ಭಾರತೀಯ ಉದ್ಯಮಿ ಗೌತಮ್ ಹಾತಿರಾಮನಿ ಅವರನ್ನು ವಿವಾಹವಾಗಿದ್ದಾರೆ.
ಈ ಮೂಲಕ ಮೂರು‌ ಮಕ್ಕಳ ತಾಯಿ ಎರಡನೇ ಬಾರಿ ಹಸಮಣೆಯೇರಿದ್ದಾರೆ.

ಲಂಡನ್‌ನಲ್ಲಿ ಈ ವಿವಾಹ ನೆರವೇರಿದ್ದು ಅವರ ವಿವಾಹ ಕಾರ್ಯಕ್ರಮದ ಚಿತ್ರಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಧು ಮತ್ತು ವರ ಇಬ್ಬರೂ ನೀಲಿ ಹಾಗೂ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು. ಅಲಂಕರಿಸಿದ ಲೆಹೆಂಗಾದಲ್ಲಿ ಕನಿಕಾ ಮಿಂಚುತ್ತಿದ್ದರು. ಗೌತಮ್ ಶೇರ್ವಾನಿ ಧರಿಸಿದ್ದರು.

ಕಳೆದ ಶುಕ್ರವಾರ, ಕನಿಕಾ ಕಪೂರ್ ತಮ್ಮ ಮೆಹೆಂದಿ ಸಮಾರಂಭದ ಚಿತ್ರಗಳನ್ನು ತಮ್ಮ Instagram ಪ್ರೊಫೈಲ್ನಲ್ಲಿ ಹಂಚಿಕೊಂಡಿದ್ದರು.
ಕನಿಕಾ ಕಪೂರ್ ಈ ಹಿಂದೆ ರಾಜ್ ಚಂದೌಕ್ ಅವರನ್ನು ವಿವಾಹವಾಗಿದ್ದು ಅವರಿಗೆ ಮೂವರು ಮಕ್ಕಳಿದ್ದಾರೆ. ಅವರು 2012 ರಲ್ಲಿ ವಿಚ್ಛೇದನ ಪಡೆದಿದ್ದರು. 2012 ರಲ್ಲಿ ಡಾ. ಜ್ಯೂಸ್ ಅವರೊಂದಿಗೆ ಜುಗ್ನಿ ಜಿ ಎಂಬ ಶೀರ್ಷಿಕೆಯ ಹಾಡಿನೊಂದಿಗೆ ಗಮನ ಸೆಳೆದ ಈ ಗಾಯಕಿ ಮೂಲತಃ ಲಕ್ನೋದವರು

ಮತ್ತಷ್ಟು ಸುದ್ದಿಗಳು

vertical

Latest News

ಕಾಲಿಗೆ ನಮಸ್ಕಾರ ಮಾಡುವ ನಾಟಕ: ಚಂದ್ರಶೇಖರ್ ಗುರೂಜಿಗೆ 70 ಬಾರಿ ಇರಿದ ದುಷ್ಕರ್ಮಿಗಳು

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಮೇಲೆ ದುಷ್ಕರ್ಮಿಗಳು 70 ಬಾರಿ ಇರಿದು ಹತ್ಯೆ ಮಾಡಿದ್ದಾರೆ.  ಅತ್ಯಂತ ಭೀಕರವಾಗಿ ಚುಚ್ಚಿ ಚುಚ್ಚಿ ಹತ್ಯೆ ಮಾಡಲಾಗಿದೆ. ಇಬ್ಬರು...

ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಸ್ಪೈಸ್ ಜೆಟ್

newsics.com ನವದೆಹಲಿ:  ದೆಹಲಿಯಿಂದ  ದುಬೈಗೆ ಪ್ರಯಾಣಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ದೋಷದ ಕಾರಣ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ  ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ತಕ್ಷಣ ಪೈಲಟ್ ಕರಾಚಿ ವಿಮಾನ ನಿಲ್ದಾಣ...

ಚಾಕು ಇರಿದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ...
- Advertisement -
error: Content is protected !!