newsics.com
ಶೇರ್ಷಾ ಸಿನಿಮಾದ ಯಶಸ್ಸಿನ ಬಳಿಕ ಇದೀಗ ಜುಗ್ಜುಗ್ ಜಿಯೋ ಸಿನಿಮಾದಲ್ಲಿ ನಟಿ ಕಿಯಾರಾ ಅಡ್ವಾಣಿ ಬ್ಯುಸಿಯಾಗಿದ್ದಾರೆ. ಜುಗ್ಜುಗ್ ಜಿಯೋ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮದುವೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ನಟಿ ಕಿಯಾರಾ ಖಡಕ್ ಉತ್ತರ ನೀಡಿದ್ದಾರೆ.
ನಾನು ಮದುವೆಯಾಗದೆ ಕೂಡ ಖುಷಿಯಿಂದ ಜೀವಿಸಬಲ್ಲೆ. ಕೆಲಸ ಮಾಡುತ್ತಿದ್ದೇನೆ. ಆದಾಯ ಗಳಿಸುತ್ತಿದ್ದೇನೆ ಹಾಗೂ ನಾನು ಸಂತೋಷವಾಗಿದ್ದೇನೆ ಎಂದು ಮಾಧ್ಯಮಗಳಿಗೆ ಉತ್ತರಿಸಿದ್ದಾರೆ.
ನಟಿ ಕಿಯಾರಾ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಡೇಟಿಂಗ್ನಲ್ಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಇದೀಗ ಇವರಿಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ವದಂತಿ ಕೂಡ ಬಿಟೌನ್ನಲ್ಲಿ ಹರಿದಾಡುತ್ತಿದೆ.