NEWSICS.COM
ನವದೆಹಲಿ: ಮುಂಬೈ ಮೂಲದ ವೇಶ್ಯಾಗೃಹದ ಒಡತಿಯ ಜೀವನವನ್ನು ಆಧರಿಸಿದ ಬಾಲಿವುಡ್’ನ ‘ಗಂಗುಬಾಯಿ ಕಥಿಯಾವಾಡಿ’ ಚಿತ್ರತಂಡದ ವಿರುದ್ಧ ದೂರು ದಾಖಲಾಗಿದೆ.
ಗಂಗುಬಾಯಿ ಅವರ ಪುತ್ರ ಬಾಬುಜಿ ರಾವ್ಜಿ ಷಾ , ವೇಶ್ಯಾಗೃಹದ ಒಡತಿಯ ಜೀವನಕಥೆಯನ್ನು ಅದೇ ಹೆಸರಿನಲ್ಲಿ ಗುರುತಿಸಿದೆ ಎಂದು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ, ನಟಿ ಆಲಿಯಾ ಭಟ್ ಹಾಗೂ ಪ್ರೊಡಕ್ಷನ್ಸ್ ಹೌಸ್ ವಿರುದ್ಧ ದೂರು ದಾಖಲಿಸಿದ್ದಾರೆ.
ಬೋರ್ಜಸ್ ಅವರ ಮೂಲ ಸಂಶೋಧನೆಯೊಂದಿಗೆ ಜೈದಿ ಬರೆದ ದಿ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಪುಸ್ತಕವನ್ನು ಈ ಚಿತ್ರ ಆಧರಿಸಿದೆ. ಮುಂಬೈನ ಮಾಫಿಯಾ ಕ್ವೀನ್ಸ್ನ ಕೆಲವು ಭಾಗಗಳಲ್ಲಿ ಗೌಪ್ಯತೆ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಆದ್ದರಿಂದ ಗಂಗೂಬಾಯಿ ಅವರ ಜೀವನಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ಅಳಿಸಿ, ಚಲನಚಿತ್ರದ ನಿರ್ಮಾಣವನ್ನು ನಿಲ್ಲಿಸಬೇಕು ಎಂದು ಬಾಬುಜಿ ಹೇಳಿದ್ದಾರೆ ಎಂದು ವರದಿಯಾಗಿದೆ.