ನವದೆಹಲಿ: ದೀಪಿಕಾ ಪಡುಕೋಣೆ ಅಭಿನಯದ ಛಪಕ್ ಚಿತ್ರದಲ್ಲಿ ಆಕೆಯ ಪರ ವಾದ ಮಂಡಿಸಿದ ವಕೀಲ ಹೆಸರನ್ನೂ ಉಲ್ಲೇಖಿಸಬೇಕೆಂದು ಚಿತ್ರನಿರ್ದೇಶಕರಿಗೆ ದೆಹಲಿಯ ಪಟಿಯಾಲ ನ್ಯಾಯಾಲಯ ನಿರ್ದೇಶಿಸಿದೆ.
ಹಲವು ವರ್ಷಗಳ ಕಾಲ ಆಸಿಡ್ ದಾಳಿಯ ಸಂತ್ರಸ್ತೆ ಲಕ್ಷ್ಮೀ ಅಗರ್ ವಾಲ್ ಪರ ವಾದ ಮಂಡಿಸಿದ್ದ ವಕೀಲರಾದ ಅಪರ್ಣಾ ಭಟ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಚಿತ್ರದಲ್ಲಿ ತಮಗೆ ಕ್ರೆಡಿಟ್ ನೀಡಲಾಗಿಲ್ಲ ಎಂದು ಆರೋಪಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಆಕೆಗೆ ಸಲ್ಲಬೇಕಾದ ಗೌರವವನ್ನು ನೀಡುವಂತೆ ಚಿತ್ರದ ನಿರ್ದೇಶಕಿ ಮೇಘನಾ ಗುಲ್ಜಾರ್ ಅವರಿಗೆ ಸೂಚಿಸಿದೆ.