newsics.com
ಮುಂಬೈ: ಒಂದು ವಾರ ನಡೆದ ಪ್ರತಿಷ್ಠಿತ ಲ್ಯಾಕ್ಮೇ ಫ್ಯಾಷನ್ ಶೋ ಗೆ ತೆರೆ ಬಿದ್ದಿದೆ. ಕೊರೋನಾ ಮಹಾ ಮಾರಿ ಆತಂಕದ ಮಧ್ಯೆ ಫ್ಯಾಷನ್ ಶೋ ಯಶಸ್ವಿಯಾಗಿ ನಡೆದಿದೆ. ದೇಶ ವಿದೇಶಗಳ ಹೆಸರಾಂತ ರೂಪದರ್ಶಿಯರು ಇದರಲ್ಲಿ ಭಾಗವಹಿಸಿದರು.
ಹೆಸರಾಂತ ವಸ್ತ್ರ ವಿನ್ಯಾಸಕರು ತಮ್ಮ ಕಲ್ಪನೆಯ ಉಡುಪುಗಳನ್ನು ಫ್ಯಾಷನ್ ಶೋದಲ್ಲಿ ಪರಿಚಯಿಸಿದರು. ಅದರ ಒಂದು ಝಲಕ್ ಇಲ್ಲಿದೆ.
ಪ್ರತಿಭಾವಂತ ರೂಪದರ್ಶಿಯರಿಗೆ ಈ ಫ್ಯಾಷನ್ ಶೋ ವೇದಿಕೆ ಕಲ್ಪಿಸಿತ್ತು. ಇವರ ಜತೆಗೆ ಕರೀನಾ ಕಪೂರ್ ಖಾನ್ ಸೇರಿದಂತೆ ಹಲವು ನಟಿಯರು ಫ್ಯಾಷನ್ ಶೋ ದಲ್ಲಿ ಮಿಂಚಿದರು.