Monday, October 3, 2022

ಸ್ಯಾಂಡಲ್‌ವುಡ್ ನವ ನಾಯಕಿ ವಿರುದ್ಧ ಭುಗಿಲೆದ್ದ ವಿವಾದ, ಮಾಲಾಶ್ರೀ ಹೇಳಿಕೆಗೆ ಆಕ್ರೋಶ

Follow Us

newsics.com

ಈ ಹಿಂದೆ ಕನಸಿನ ರಾಣಿ ಮಾಲಾಶ್ರೀ‌ ನೀಡಿದ್ದ ಹೇಳಿಕೆ ಇದೀಗ ಮಾಲಾಶ್ರೀ ಹಾಗೂ ಅವರ ಪುತ್ರಿ ಸುತ್ತ ವಿವಾದವನ್ನು ಸೃಷ್ಟಿಸಿದೆ.

ನನ್ನ ಮಗಳು ತೆಲುಗು ಚಿತ್ರದ ಮೂಲಕವೇ ಚಿತ್ರರಂಗ ಪ್ರವೇಶಿಸುತ್ತಾಳೆ. ಕನ್ನಡಕ್ಕಿಂತ ತೆಲುಗಿನಲ್ಲೇ ರೀಚ್ ಹೆಚ್ಚು ಎಂದಿದ್ದ ನಟಿ ಮಾಲಾಶ್ರೀ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಈ ಹಿಂದೆ ಮಾಲಾಶ್ರೀ ತೆಲುಗಿನ ಕಾಮಿಡಿ ನಟ ಅಲಿ ನಡೆಸುವ ‘ಅಲಿತೋ ಸರದಾಗ’ ಎಂಬ ಶೋನಲ್ಲಿ ಭಾಗಿಯಾಗಿದ್ದ ಮಾಲಾಶ್ರೀ ಈ ಹೇಳಿಕೆ ನೀಡಿದ್ದರು. ಈ ಹೇಳಿಕೆಯುಳ್ಳ ವಿಡಿಯೋ ವೈರಲ್ ಆಗಿದೆ.

ರಿಯಾಲಿಟಿ ಶೋನಲ್ಲಿ ಅಲಿ ಮಾಲಾಶ್ರೀ ಮಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಉತ್ತರಿಸಿದ ಮಾಲಾಶ್ರೀ, ನನ್ನ ಮಗಳು ತೆಲುಗು ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವುದು. ನಾನು ಕನ್ನಡ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿರಬಹುದು. ಆದರೆ ನನ್ನ ಮಗಳು ಮಾತ್ರ ತೆಲುಗು ಸಿನಿಮಾ ಮೂಲಕವೇ ಎಂಟ್ರಿ ಕೊಡುವುದು ಎಂದಿದ್ದಾರೆ. ಅಲ್ಲದೇ ನನ್ನ ಮಗಳು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದು ತೆಲುಗು ಮೂಲಕ ಎಂಟ್ರಿ ಕೊಟ್ಟರೆ ಹೆಚ್ಚು ಜನಕ್ಕೆ ರೀಚ್ ಆಗ್ತಾರೆ. ಇನ್ನು ನನ್ನ ಮಗಳು ಕನ್ನಡಕ್ಕಿಂತ ಹೆಚ್ಚು ತೆಲುಗು ಸಿನಿಮಾವನ್ನೇ ನೋಡುವುದು ಎಂದೂ ಹೇಳುತ್ತಾರೆ. ಇದೀಗ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಮಾಲಾಶ್ರೀ ತೆಲುಗು ಪ್ರೇಮವನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಈಗ ನಿಮಗೆ ದರ್ಶನ್ ಬೇಕಾಯಿತಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್‌ನ ಸಿನಿಮಾ ಮುಹೂರ್ತ ವರಮಹಾಲಕ್ಷ್ಮಿ ಹಬ್ಬದ ದಿನ ನೆರವೇರಿದೆ. ಕನಸಿನ ರಾಣಿ ಮಾಲಾಶ್ರೀ ಮಗಳು ರಾಧನಾ ರಾಮ್ ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದಾರೆ.

ತಮಿಳು ಸ್ಟಾರ್ ನಟಿ ಆತ್ಮಹತ್ಯೆಗೆ ಯತ್ನ: ಆಸ್ಪತ್ರೆಗೆ ದಾಖಲು

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!