Wednesday, December 8, 2021

ರಸ್ತೆ ರಿಪೇರಿ ಮಾಡಿದ ಹಂಸಲೇಖ!

Follow Us

ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ಸೆಲೆಬ್ರಿಟಿಗಳು ಅಡುಗೆ ಮಾಡುವುದರಲ್ಲೋ, ಮನೆ ಕ್ಲೀನ್ ಮಾಡುವುದರಲ್ಲೋ, ಡಾನ್ಸ್ ಮಾಡುವುದರಲ್ಲೋ ಬ್ಯುಸಿಯಾಗಿದ್ದರೆ, ಖ್ಯಾತ ಗೀತ ರಚನೆಕಾರ, ಸಂಗೀತ ನಿರ್ದೇಶಕ ಹಂಸಲೇಖ ತಮ್ಮ ಮನೆ ಹತ್ತಿರದ ರಸ್ತೆ ದುರಸ್ತಿ ಮಾಡಿದ್ದಾರೆ.
ಮಹಾಲಕ್ಷ್ಮಿ ಲೇಔಟ್‌ನ ಹಂಸಲೇಖ ಮನೆಯಿರುವ ರಸ್ತೆ ಗುಂಡಿಗಳಿಂದ ಹಾಳಾಗಿತ್ತು, ಅದನ್ನು ರಿಪೇರಿ ಮಾಡಲೆಂದು ಬಿಬಿಎಂಪಿ ಸಿಬ್ಬಂದಿ ಜಲ್ಲಿಕಲ್ಲು ತಂದು ಸುರಿದಿದ್ದರು. ಆದರೆ ಕೆಲಸ ಆರಂಭವಾಗಿರಲಿಲ್ಲ.
ಮಂಗಳವಾರ ತಾವೇ ರಸ್ತೆಗೆ ಇಳಿದ ಹಂಸಲೇಖ, ಸಲಿಕೆಯಲ್ಲಿ ಜಲ್ಲಿಕಲ್ಲು ತುಂಬಿ ರಸ್ತೆಗೆ ಹಾಕಿ ಗುಂಡಿ ಮುಚ್ಚಿ, ಕಾಂಕ್ರಿಟ್ ಸ್ಪ್ರೇ ಮಾಡಿ ರಸ್ತೆ ರಿಪೇರಿ ಮಾಡಿದ್ದಾರೆ. ಹಂಸಲೇಖ ಅವರು ರಸ್ತೆ ರಿಪೇರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮತ್ತಷ್ಟು ಸುದ್ದಿಗಳು

Latest News

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...

ಭಾರೀ ಸದ್ದು ಕೇಳಿಸ್ತು… ಮೂವರು ಜಿಗಿದರು… ಬೆಂಕಿ ಜೋರಾಯ್ತು…

newsics.com ಊಟಿ(ತಮಿಳುನಾಡು): ನೋಡ ನೋಡುತ್ತಿದ್ದಂತೆ ಹೆಲಿಕಾಪ್ಟರ್‌ವೊಂದು‌ ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿಯಲಾರಂಭಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ದೊಡ್ಡ ಸದ್ದು ಕೇಳಿಸಿತು. ತಕ್ಷಣ ಹೊರಬಂದು‌...
- Advertisement -
error: Content is protected !!