newsics.com
ಬೆಂಗಳೂರು: ನಟನೆಯ ಮೂಲಕ ವೀಕ್ಷಕರನ್ನು ರಂಜಿಸುವ ನಟನಟಿಯರು ಕೊರೋನಾ ಅಟ್ಟಹಾಸಕ್ಕೆ ಹೆಚ್ಚಿನ ಪ್ರಮಾಣದಲ್ಲೇ ತುತ್ತಾಗುತ್ತಿದ್ದಾರೆ. ಒಂದನೇ ಹಾಗೂ ಎರಡನೇ ಅಲೆಯಲ್ಲಿ ಶೂಟಿಂಗ್ಗೆ ಅಷ್ಟೊಂದು ಅವಕಾಶ ಇರಲಿಲ್ಲ. ಆದರೆ ಈ ಬಾರಿ ಲಾಕ್ಡೌನ್ ಇಲ್ಲದ ಕಾರಣ ಎಲ್ಲವೂ ಸಹಜವಾಗಿ ಸಾಗುತ್ತಿದೆ. ಹೀಗಾಗಿ ನಟ ನಟಿಯರು ಹೆಚ್ಚಿನ ಸಂಖ್ಯೆಯಲ್ಲೇ ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಾರೆ.
ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ಕನ್ನಡತಿಯಲ್ಲಿ ನಾಯಕಿ ಭುವಿಯಾಗಿ ನಟಿಸುತ್ತಿರುವ ರಂಜನಿ ರಾಘವನ್ ಅವರಿಗೆ ಕೋವಿಡ್ ತಗುಲಿದೆ. ಇದನ್ನು ರಂಜನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಸಹನಟ ಕಿರಣ್ ರಾಜ್ ಅವರು ರಿಪ್ಲೈ ಮಾಡಿದ್ದು ಗೆಟ್ ವೆಲ್ ಸೂನ್ ಚಾಂಪ್ಸ್ ಎಂದು ವಿಶ್ ಮಾಡಿದ್ದರು.
ಧಾರಾವಾಹಿಯ ಪ್ರಮುಖ ಪಾತ್ರಧಾರಿಯೇ ಕೋವಿಡ್ ಸಂಕಷ್ಟಕ್ಕೆ ಗುರಿಯಾಗಿರುವುದರಿಂದ ಟೀಮ್ ಈ ಸನ್ನಿವೇಶವನ್ನು ಎದುರಿಸಲು ಸಜ್ಜಾಗಿದೆ.
ದೇಶದಲ್ಲಿ ಹತ್ತು ಸಾವಿರ ದಾಟಿದ ಒಮೈಕ್ರಾನ್ ಸೋಂಕು, ಕೊರೋನಾದಿಂದ ಒಂದೇ ದಿನ 488 ಜನರ ಸಾವು