ಮುಂಬೈ: ಅಭಿಮಾನಿಗಳಿಂದ ನಟಿ ಸನ್ನಿ ಲಿಯೋನ್ ಕಿರಿ ಕಿರಿ ಅನುಭವಿಸಿದ ಪ್ರಸಂಗ ಇಲ್ಲಿನ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಅಭಿಮಾನಿಯ ವರ್ತನೆ ತಡೆದುಕೊಳ್ಳಲಾರದೆ ಸನ್ನಿ ಲಿಯೋನ್ ಅಲ್ಲಿಂದ ಓಡಿಹೋಗಿದ್ದಾರೆ.
ನಟಿ ಸನ್ನಿ ಲಿಯೋನ್ ಸಿನಿಮಾವೊಂದರ ಚಿತ್ರೀಕರಣ ಮುಗಿಸಿಕೊಂಡು ಮುಂಬೈಗೆ ವಾಪಸ್ ಆಗುತ್ತಿದ್ದರು. ಪತಿ ಡೇನಿಯರ್ ಜತೆ ಏರ್ ಪೋರ್ಟ್ ನಲ್ಲಿ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಅವರ ಎದುರಿಗೆ ಬಂದ ಅಭಿಮಾನಿಗಳ ಗುಂಪು ಸೆಲ್ಫಿ ಬೇಕು ಎಂದರು. ಮೊದಲು ಓಕೆ ಎಂದ ಸನ್ನಿ ನಂತರ ಅವರಿಂದ ಓಡಿಹೋಗಿದ್ದಾರೆ.
ಕೊರೊನಾ ವೈರಸ್ ನಿಂದಾಗಿ ಅಭಿಮಾನಿಯನ್ನು ಸನ್ನಿ ಲಿಯೋನ್ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ ಎನ್ನಲಾಗಿದೆ. ಈಗಾಗಲೇ ಮುಂಬೈನಲ್ಲಿಯೂ ವೈರಸ್ ಪತ್ತೆಯಾಗಿದ್ದು, ಈ ಕಾರಣದಿಂದ ಸನ್ನಿ ಲಿಯೋನ್ ಅಭಿಮಾನಿಗೆ ಫೋಟೋ ನೀಡಲು ನಿರಾಕರಿಸಿದ್ದಾರೆ.
ಈ ಘಟನೆಯ ಬಳಿಕ ಮಾಸ್ಕ್ ಹಾಕಿಕೊಂಡ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸನ್ನಿ ಲಿಯೋನ್ ಹಂಚಿಕೊಂಡಿದ್ದಾರೆ. ಅವರ ಜತೆ ಪತಿ ಡೇನಿಯರ್ ಕೂಡ ಇದ್ದಾರೆ.
ಕೊರೊನಾ ವೈರಸ್: ಅಭಿಮಾನಿಗಳ ಕಾಟ ತಾಳಲಾರದೆ ಓಡಿದ ಸನ್ನಿ
Follow Us