newsics.com
ಮುಂಬೈ: ನಟಿ ದೀಪಿಕಾ ಪಡುಕೋಣೆ ಪ್ರತಿಭಾನ್ವಿತ ನಟಿ. ಇದರಲ್ಲಿ ಎರಡು ಮಾತಿಲ್ಲ. ಇದೀಗ ಗೆಹ್ರಿಯಾನ್ ಸಿನೆಮಾದ ಒಂದು ಸೀನ್ ಶೂಟಿಂಗ್ ಮಾಡಲು 48 ರಿಟೇಕ್ ತೆಗೆದುಕೊಂಡಿದ್ದೇನೆ ಎಂದು ದೀಪಿಕಾ ಬಹಿರಂಗಪಡಿಸಿದ್ದಾರೆ.
ಇದು ಯಾವ ಸೀನ್ ಎಂಬುದನ್ನು ಅವರು ಹೇಳಿಲ್ಲ. ಹಾಟ್ ಸೀನ್ ಪರಿಣಾಮಕಾರಿಯಾಗಿ ಮೂಡಿ ಬರಲು ದೀಪಿಕಾ ಈ ಕಸರತ್ತು ಮಾಡಿದ್ದಾರೆ.
ಈ ಚಿತ್ರದಲ್ಲಿ ಅನನ್ಯಾ ಪಾಂಡೆ, ಸಿದ್ದಾರ್ಥ್ ಚತುರ್ವೇದಿ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ