ಮುಂಬೈ: ನವದೆಹಲಿಯ ಜೆಎನ್ ಯು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ನಟಿ ದೀಪಿಕಾ ಪಡುಕೋಣೆಯ ಟ್ವಿಟರ್ ಹಿಂಬಾಲಕರ ಸಂಖ್ಯೆಯಲ್ಲಿ ಏಕಾಏಕಿ ಭಾರಿ ಏರಿಕೆ ಕಂಡುಬಂದಿದೆ.
ಎರಡೇ ದಿನಗಳಲ್ಲಿ ದೀಪಿಕಾ ಟ್ವಿಟರ್ ಹಿಂಬಾಲಕರ ಸಂಖ್ಯೆ 40 ಸಾವಿರ ಹೆಚ್ಚಾಗಿದ್ದು, 26.8 ಮಿಲಿಯನ್ ತಲುಪಿದೆ. ಇದರಿಂದ ದೀಪಿಕಾ, ಮತ್ತೋರ್ವ ನಟಿ ಪ್ರಿಯಾಂಕಾ ಚೋಪ್ರಾರನ್ನು ಹಿಂದಿಕ್ಕಿದಂತಾಗಿದೆ.