ಮುಂಬೈ: ಅನುಮಾನಾಸ್ಪದವಾಗಿ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರವೂ ಜನಪ್ರಿಯತೆ ಕಳೆದುಕೊಳ್ಳದೆ ತಮ್ಮ ಸಾಧನೆ ಮುಂದುವರಿಸಿದ್ದು, ಅವರ ಕೊನೆಯ ಚಿತ್ರ ದಿಲ್ ಬೇಚಾರಾ ಯೂಟ್ಯೂಬ್ ನ ಇದುವರೆಗಿನ ಎಲ್ಲ ದಾಖಲೆ ಮುರಿದಿದೆ.
ಇತ್ತೀಚೆಗೆ ಆತ್ಮಹತ್ಯೆ ರೀತಿಯಲ್ಲಿ ಸಾವನ್ನಪ್ಪಿದ ನಟ ಸುಶಾಂತ್ ಸಿಂಗ್ ರಜಪೂತ್ ಕೊನೆಯ ಚಿತ್ರ ದಿಲ್ ಬೇಚಾರಾ ಚಿತ್ರದ ಟ್ರೇಲರ್ ಯೂಟ್ಯೂಬ್’ನಲ್ಲಿ ಈಗಾಗಲೇ 10 ಮಿಲಿಯನ್ ಲೈಕ್ಸ್ ಪಡೆದುಕೊಂಡಿದ್ದು ಎಲ್ಲ ದಾಖಲೆಗಳನ್ನು ಮುರಿದಿದೆ.
ಬಿಡುಗಡೆಯಾದ 24 ಗಂಟೆಯೊಳಗೆ ಅತ್ಯಂತ ಹೆಚ್ಚು ಲೈಕ್ ಪಡೆದ ಟ್ರೇಲರ್ ಎಂಬ ದಾಖಲೆಗೆ ಪಾತ್ರವಾಗಿದ್ದ ಈ ಟ್ರೇಲರ್ ಇದೀಗ ಬಿಡುಗಡೆಯಾದ 10 ದಿನದಲ್ಲಿ 72 ಮಿಲಿಯನ್ ಸಲ ವೀಕ್ಷಣೆಗೊಳಪಡುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ
ಇದೇ ಜುಲೈ 6 ರಂದು ಈ ಟ್ರೇಲರ್ ಬಿಡುಗಡೆಗೊಂಡಿತ್ತು. ದಿಲ್ ಬೇಚಾರಾ ಸೇರಿದಂತೆ ಇನ್ನೂ ನಾಲ್ಕು ಚಿತ್ರಗಳಲ್ಲಿ ನಟಿಸಬೇಕಿದ್ದ ಸುಶಾಂತ್ ಶವ ಆತ್ಮಹತ್ಯೆ ಯ ರೀತಿಯಲ್ಲಿ ಅವರ ಅಪಾರ್ಟ್ಮೆಂಟ್ ನಲ್ಲಿ ಪತ್ತೆಯಾಗಿತ್ತು.