newsics.com
ಮುಂಬೈ: ನಿರ್ದೇಶಕ ವಿಕ್ರಂ ಭಟ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಿನೆಮಾ ಕಾರಣಕ್ಕೆ ಅಲ್ಲ. ಬದಲಾಗಿ ವೈಯಕ್ತಿಕ ಜೀವನದಲ್ಲಿನ ಘಟನೆಗಾಗಿ. ಹೌದು. ವಿಕ್ರಂ ಭಟ್ ಮದುವೆಯಾಗಿದ್ದಾರೆ. ವಧು ಶ್ವೇತಾಂಬರಿ.
ಕಳೆದ ವರ್ಷ ಮದುವೆಯಾಗಿದ್ದರೂ ಇದು ಬಹಿರಂಗವಾದದ್ದು ಬುಧವಾರ.
ನನ್ನ ಮತ್ತು ಶ್ವೇತಾಂಬರಿ ಮಧ್ಯೆ ಕ್ರೇಜಿ ಲವ್ ಇಲ್ಲ. ಬದಲಾಗಿ ಇದು ಸಂತೃಪ್ತ ಸಂಬಂಧದ ಕಲ್ಪನೆ ಎಂದು ವಿಕ್ರಂ ಭಟ್ ಹೇಳಿದ್ದಾರೆ.
ಮದುವೆಗೆ ಮಕ್ಕಳ ಒಪ್ಪಿಗೆ ಬೇಕಿತ್ತು. ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಮುಖ್ಯವಾಗಿತ್ತು. ಅದಕ್ಕಾಗಿ ಬಹಿರಂಗಪಡಿಸಿರಲಿಲ್ಲ ಎಂದು ವಿಕ್ರಂ ಭಟ್ ಹೇಳಿದ್ದಾರೆ.
ಈ ಹಿಂದೆ ವಿಕ್ರಂ ಭಟ್ ಹೆಸರು ನಟಿ ಸುಶ್ಮಿತಾ ಸೇನ್ ಜತೆಯೂ ಕೇಳಿಬಂದಿತ್ತು.