newsics.com
ಬಾಲಿವುಡ್ ನಟಿ ದಿಶಾ ಪಟಾನಿ ಫಿಟ್ನೆಸ್ ಫ್ರೀಕ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಫಿಟ್ನೆಸ್ ಜೊತೆಯಲ್ಲಿ ಮಹಿಳೆಯರು ಆತ್ಮರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬುದಕ್ಕೆ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
ಮಾರ್ಷಲ್ ಆರ್ಟ್ಸ್ ಸಾಹವನ್ನು ಜಿಮ್ನಲ್ಲಿ ಪ್ರದರ್ಶಿಸಿರುವ ದಿಶಾ ಪಟಾನಿ ತಮ್ಮ ಸಮರ ಕಲೆಯ ಮೂಲಕ ಎದುರಿಗಿದ್ದ ವ್ಯಕ್ತಿಯನ್ನು ನೆಲಕ್ಕುರುಳಿಸಿದ್ದಾರೆ. ಅಂದಹಾಗೆ ಇಲ್ಲಿರುವ ವ್ಯಕ್ತಿ ದಿಶಾ ಪಟಾನಿಯ ಪರಿಚಯಸ್ಥರೇ ಆಗಿದ್ದು ಮಹಿಳೆಯರು ಯಾವ ರೀತಿ ಆತ್ಮರಕ್ಷಣೆ ಮಾಡಿಕೊಳ್ಳಬೇಕು ಎಂಬುದಕ್ಕೆ ಅಣುಕು ಪ್ರದರ್ಶನ ಮಾಡಿ ತೋರಿಸಿದ್ದಾರೆ.