newsics.com
ನವದೆಹಲಿ: ನಟಿ ಕನಿಷ್ಕ ಸೋನಿ ತನ್ನ ಮದುವೆ ಸುದ್ದಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿವಾಹಿತ ಮಹಿಳೆಯರು ಧರಿಸುವ ‘ಸಿಂಧೂರ’ ಮತ್ತು ‘ಮಂಗಳಸೂತ್ರ’ ಧರಿಸಿರುವ ಫೋಟೋಗಳನ್ನು ಹಂಚಿಕೊಂಡಿರುವ ಕನಿಷ್ಕಾ ಸೋನಿ ತನ್ನನ್ನು ತಾನೇ ಮದುವೆಯಾಗಿರುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
ಕನಿಷ್ಠ ಸೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ನನ್ನನ್ನೇ ನಾನು ಮದುವೆಯಾಗಿದ್ದೇನೆ. ನನಗೆ ಯಾವುದೇ ಪುರುಷನ ಅಗತ್ಯವಿಲ್ಲ. ನನ್ನೊಂದಿಗೆ ನಾನು ಸುಖವಾಗಿದ್ದೇನೆ. ಏಕಾಂತದಲ್ಲಿ ಬೇಸರವೆನಿಸಿದರೆ ಗಿಟಾರ್ ನುಡಿಸುತ್ತಾ ಸಂತೋಷವಾಗಿರುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಕಳೆದ ಜೂನ್ 11ರಂದು ಗುಜರಾತ್‌ನ 24 ವರ್ಷದ ಕ್ಷಮಾ ಬಿಂದು ತನ್ನನ್ನು ತಾನೇ ಮದುವೆಯಾಗುವ ಮೂಲಕ ಭಾರೀ ಸುದ್ದಿಯಾಗಿದ್ದರು. ಏಕಾಂಗಿಯಾಗಿಯೇ ಗೋವಾಗೆ ಹನಿಮೂನ್ ಟ್ರಿಪ್ ಕೂಡ ಹೋಗಿಬಂದಿದ್ದರು.
ಸುಲಿಗೆ ಪ್ರಕರಣ: ಇಡಿ ಚಾರ್ಜ್‌ಶೀಟ್‌ನಲ್ಲಿ ರಾ ರಾ ರಕ್ಕಮ್ಮ ಬೆಡಗಿ, ಜಾಕ್ವೆಲಿನ್ ಫರ್ನಾಂಡಿಸ್‌ಗೆ ಬಂಧನ ಭೀತಿ