newsics.com
ಬೆಂಗಳೂರು: ಖಾಸಗಿವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹಬ್ಬಿದೆ.
ಭಾನುವಾರದ ಎಪಿಸೋಡ್ ಮುಗಿದ ಎರಡೇ ದಿನಕ್ಕೆ ಅಂದರೆ ಮಂಗಳವಾರದಂದು ಮುಂದಿನ ವೀಕೆಂಡ್ನ ಅತಿಥಿ ಯಾರೆಂಬ ಪ್ರೋಮೋ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಬಾರಿ ಯಾವುದೇ ಪ್ರೋಮೋ ಆಗಲಿ, ಸುಳಿವು ಬಿಟ್ಟುಕೊಡುವ ಫೋಟೊಗಳನ್ನಾಗಲಿ ವಾಹಿನಿ ಹಂಚಿಕೊಂಡಿಲ್ಲ.
ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಈ ಬಾರಿ ವೀಕೆಂಡ್ ವಿತ್ ರಮೇಶ್ಗೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಡಿಕೆ ಶಿವಕುಮಾರ್ ಎಪಿಸೋಡ್ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇದೇ ವಾರಾಂತ್ಯಕ್ಕೆ ಎರಡು ದಿನಗಳ ಕಾಲ ಡಿ.ಕೆ.ಶಿವಕುಮಾರ್ ಎಪಿಸೋಡ್ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ
ಡಿಕೆ ಶಿವಕುಮಾರ್ ವೀಕೆಂಡ್ ವಿತ್ ರಮೇಶ್ಗೆ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ವೀಕೆಂಡ್ ವಿತ್ ರಮೇಶ್ ಇತಿಹಾಸದಲ್ಲಿಯೇ ಮಹತ್ವದ ಎಪಿಸೋಡ್ ಆಗುವ ನಿರೀಕ್ಷೆ ಇದೆ.