newsics.com
ನಟಿ ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಬಿಗ್ ಬಜೆಟ್ ಚಿತ್ರವೊಂದಕ್ಕೆ ರಾಧನಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವರಮಹಾಲಕ್ಷ್ಮೀ ಹಬ್ಬದಂದು ಸಿನಿಮಾ ಮುಹೂರ್ತ ಕೂಡ ನೇರವೇರಿದೆ.
ಮಾಲಾಶ್ರೀ ಪುತ್ರಿಯ ಮೂಲ ಹೆಸರು ಅನನ್ಯಾ. ಮನೆಯಲ್ಲಿ ಎಲ್ಲರೂ ಪ್ರೀತಿಯಿಂದ ಅನಿ ಎಂದೇ ಕರೆಯುತ್ತಾರೆ. ಆದರೆ ಈಗ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿರುವ ಅವರು, ರಾಧನಾ ರಾಮ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.
ನಾನು ಬಿಬಿಎ ಮುಗಿಸಿದ್ದೇನೆ. ನಾನು ನಟನೆ ಮತ್ತು ಡ್ಯಾನ್ಸ್ ಮಾಡಿದ್ದೇನೆ. ನನ್ನ ತಂದೆ ತಾಯಿ ಚಿತ್ರರಂಗದವರು ಎನ್ನುವುದೇ ನನ್ನ ಪಾಲಿನ ಅದೃಷ್ಟ. ಅಪ್ಪ ನನಗೆ ತುಂಬ ಮಾರ್ಗದರ್ಶನ ನೀಡಿದ್ದರು. ಚಿತ್ರರಂಗವನ್ನು ಗಂಭೀರವಾಗಿ ನೋಡಬೇಕು. ಇಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕು. ಕಷ್ಟ ಇದ್ದರೆ ಸಕ್ಸಸ್ ಸಿಗತ್ತೆ ಎಂದು ಅಪ್ಪ ಹೇಳುತ್ತಲೇ ಇದ್ದರು. ತರುಣ್ ಸುಧೀರ್ ಸರ್ ಮತ್ತು ದರ್ಶನ್ ಸರ್ ಕಾಂಬಿನೇಷನ್ನಲ್ಲಿ ಸಿನಿಮಾದಲ್ಲಿ ನಾನು ನಟಿಸುತ್ತಿದ್ದೇನೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.