newsics.com
ಬೆಂಗಳೂರು: ಎಸ್ ಪಿ ಬಾಲಸುಬ್ರಮಣ್ಯಂ ಅವರ ಸಾರಥ್ಯದಲ್ಲಿ ಸಂಗೀತ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದ ‘ ಎದೆ ತುಂಬಿ ಹಾಡುವೆನು’ ಸಂಗೀತ ಸ್ಪರ್ಧಾ ಸರಣಿ ಇದೀಗ ಮತ್ತೆ ಆರಂಭವಾಗುತ್ತಿದೆ.
ಕಲರ್ಸ್ ಕನ್ನಡದಲ್ಲಿ ಆ.14ರಿಂದ ಕಾರ್ಯಕ್ರಮ ಆರಂಭವಾಗುತ್ತಿದ್ದು, ವಿಶೇಷ ತೀರ್ಪುಗಾರರಾಗಿ ದಿ. ಎಸ್ ಪಿ ಬಿ ಪುತ್ರ ಎಸ್ ಪಿ ಚರಣ್ ಇರಲಿದ್ದಾರೆ.
ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ರಾಜೇಶ್ ಕೃಷ್ಣನ್, ವಿ.ಹರಿಕೃಷ್ಣ ಹಾಗೂ ರಘು ದೀಕ್ಷಿತ್ ಇರಲಿದ್ದಾರೆ.
ಅಲ್ಲದೆ ಎಸ್ ಪಿಬಿ ಅವರ ಮುಂದೆ ಸ್ಪರ್ಧಿಗಳಾಗಿದ್ದ 60 ಮಂದಿ ತೀರ್ಪುಗಾರರ ಸದಸ್ಯರಾಗಿ ಇರಲಿದ್ದಾರೆ.
ಕರ್ನಾಟಕದ 16 ಸ್ಪರ್ಧಿಗಳು ಈ ಬಾರಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಆರಂಭದ ದಿನದಿಂದು ಬಾಲಸುಬ್ರಮಣ್ಯಂ ಅವರ ಪ್ರತಿಮೆ ಶೋನಲ್ಲಿ ಅನಾವರಣಗೊಳ್ಳಲಿದ್ದು, ಅವರು ಬಳಸಿದ ಮೈಕ್ರೋಫೋನ್ ಕೂಡ ಇರಲಿದೆ.
ಈ ಬಗ್ಗೆ ಮಾತನಾಡಿದ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್, ಮೂರ್ನಾಲ್ಕು ವರ್ಷಗಳ ಹಿಂದೆಯೇ ಎಸ್ ಪಿಬಿ ಅವರ ಬಳಿ ಎದೆ ತುಂಬಿ ಹಾಡುವೆನು ಆರಂಭ ಮಾಡೋಣ ಎಂದಿದ್ದೆ. ವೇಳಾಪಟ್ಟಿ ನೋಡಿತಿಳಿಸುತ್ತೇನೆ ಎಂದಿದ್ದ ಅವರಕ 2019ರಲ್ಲಿ ಆರಂಭಿಸೋಣ ಎಂದಿದ್ದರು. ಈಗ ಅವರಿಲ್ಲದೆ ಕಾರ್ಯಕ್ರಮ ಆರಂಭಿಸುವಂತಾಗಿದೆ ಎಂದಿದ್ದಾರೆ.
ಆ.14ರಿಂದ ಜನಪ್ರಿಯ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಆರಂಭ
Follow Us