newsics.com
ನವದೆಹಲಿ: 215 ಕೋಟಿ ಸುಲಿಗೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಆರೋಪಿ ಎಂದು ಜಾರಿ ನಿರ್ದೇಶನಾಲಯ ಹೆಸರಿಸಿದೆ.
ಸುಕೇಶ್ ಚಂದ್ರ ಶೇಖರ್ ವಿರುದ್ಧ 215 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಆರೋಪಿ ಎಂದು ಇ.ಡಿ ಹೇಳಿದೆ.
ಸುಲಿಗೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ವಂಚಕ ಎಂದು ಆಕೆಗೆ ಮೊದಲೆ ತಿಳಿದಿತ್ತು ಎಂದು ಇಡಿ ಉಲ್ಲೇಖಿಸಿದೆ. ಈ ಹಿಂದೆ ಸುಕೇಶ್ ಆಕೆಗೆ 10 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಕಳುಹಿಸಿದ್ದನ್ನು ಇಡಿ ಪತ್ತೆ ಹಚ್ಚಿತ್ತು. ಈ ಮೊದಲು ನಟಿಯ 7 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು.
ದೆಹಲಿಯ ಕೋರ್ಟಿಗೆ ಇ.ಡಿ ಸಲ್ಲಿಕೆ ಮಾಡಿರುವ ಚಾರ್ಜ್ಶೀಟ್ನಲ್ಲಿ ಜಾಕ್ವೆಲಿನ್ ಹೆಸರು ಪ್ರಸ್ತಾಪವಾಗಿದ್ದು, ಅಕ್ರಮ ಹಣ ವರ್ಗಾಣೆ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದಾರೆ ಎಂದು ಇ.ಡಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಈಗಾಗಲೇ ಹಲವು ಬಾರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾಕ್ವೆಲಿನ್ ಅವರನ್ನು ವಿಚಾರಣೆ ಮಾಡಿ, ನಟಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಜಾಕ್ವೆಲಿನ್ಗೆ ಚಂದ್ರಶೇಖರ್ ನೀಡಿದ್ದ 7 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಕೂಡ ಇ.ಡಿ ವಶಕ್ಕೆ ಪಡೆದುಕೊಂಡಿತ್ತು.
ಮಿಸ್ ಶ್ರೀಲಂಕಾ ಆಗಿದ್ದ ಜಾಕ್ವೆಲಿನ್ 2006 ರಲ್ಲಿ ಅಲ್ಲಾದೀನ್ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು.
ಪ್ರಚೋದನಕಾರಿ ಉಡುಪು ಧರಿಸಿದ್ದರೆ ಲೈಂಗಿಕ ಕಿರುಕುಳ ಎನ್ನುವಂತಿಲ್ಲ: ಕೇರಳದ ನ್ಯಾಯಾಲಯ ತೀರ್ಪು