ವಿಭಿನ್ನ ಕಥಾಹಂದರವುಳ್ಳ ಈ ಸಿನಿಮಾ ಭಾರತೀಯರ ಮನ ಸೆಳೆದಿದ್ದು, ಇದೀಗ ದೂರದ ಥೈಲ್ಯಾಂಡ್ನಲ್ಲೂ ಇದು ಸದ್ದು ಮಾಡುತ್ತಿದೆ. ಥೈಲ್ಯಾಂಡ್ನ ಒಟಿಟಿಯಲ್ಲಿ ಗಂಗೂಬಾಯಿ ಬಿಡುಗಡೆಯಾಗಿದ್ದು ಅಲ್ಲಿನ ಜನರು ಈ ಸಿನಿಮಾ ಕಥೆಗೆ ಫಿದಾ ಆಗಿದ್ದಾರೆ.
• ಅನಿತಾ ಬನಾರಿ
newsics.com@gma.com
ನಟಿ ಆಲಿಯಾ ಭಟ್ ಸೆಕ್ಸ್ ವರ್ಕರ್ ಪಾತ್ರದಲ್ಲಿ ನಟಿಸಿರುವ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಇತ್ತೀಚಿನ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಸೇರಿದ್ದು ಬಾಕ್ಸ್ ಆಫೀಸ್ನಲ್ಲಿಯೂ ಸಕತ್ ಸದ್ದು ಮಾಡುತ್ತಿದೆ.
ಇದೀಗ ಈ ಸಿನಿಮಾ ಕುರಿತು ಮಗದೊಂದು ಸಂತಸದ ವಿಚಾರ ಹೊರಬಿದ್ದಿದೆ. ವಿಭಿನ್ನ ಕಥಾಹಂದರವುಳ್ಳ ಈ ಸಿನಿಮಾ ಭಾರತೀಯರ ಮನ ಸೆಳೆದಿದ್ದು, ಇದೀಗ ದೂರದ ಥೈಲ್ಯಾಂಡ್ನಲ್ಲೂ ಇದು ಸದ್ದು ಮಾಡುತ್ತಿದೆ. ಥೈಲ್ಯಾಂಡ್ನ ಒಟಿಟಿಯಲ್ಲಿ ಗಂಗೂಬಾಯಿ ಬಿಡುಗಡೆಯಾಗಿದ್ದು ಅಲ್ಲಿನ ಜನರು ಈ ಸಿನಿಮಾ ಕಥೆಗೆ ಫಿದಾ ಆಗಿದ್ದಾರೆ.
ಥೈಲ್ಯಾಂಡ್ನ ಥೈ ನೆಟ್ಪ್ಲಿಕ್ಸ್ನಲ್ಲಿ ಗಂಗೂಬಾಯಿ ಬಿಡುಗಡೆಯಾಗಿದ್ದು ದೊಡ್ಡ ಮಟ್ಟಿನ ಯಶಸ್ಸನ್ನು ಗಳಿಸಿದೆ. ಥೈಲ್ಯಾಂಡ್ ಜನರ ಪ್ರೀತಿಗೆ ಸೋತಿರುವ ಆಲಿಯಾ ಧನ್ಯವಾದ ಹೇಳಿದ್ದಾರೆ. ಜೊತೆಗೆ ಆದಷ್ಟು ಬೇಗ ಥೈಲ್ಯಾಂಡ್ನ ಜನರನ್ನು ಭೇಟಿ ಮಾಡಲು ಆಲಿಯಾ ನಿರ್ಧರಿಸಿದ್ದಾರೆ.
ಅಂದಹಾಗೆ, ಥೈಲ್ಯಾಂಡ್ನಲ್ಲಿ ಬಾಲಿವುಡ್ ಸಿನಿಮಾಗಳನ್ನು ನೋಡಿ ಆನಂದಿಸುವುದಕ್ಕೆ ಮೊದಲೆಲ್ಲಾ ಅವಕಾಶಗಳು ಕಡಿಮೆ. ಇರಲಿಲ್ಲ ಎಂದೇ ಹೇಳಬಹುದು. ಆದರೆ ಈಗ ಒಟಿಟಿ ವ್ಯವಸ್ಥೆ ಇರುವ ಕಾರಣ ಇದೀಗ ಅಲ್ಲಿನ ಜನರಿಗೆ ಬಾಲಿವುಡ್ ಸಿನಿಮಾ ನೋಡುವ ಅವಕಾಶ ದೊರೆತಿದೆ.