Wednesday, June 16, 2021

ಅಮೇಜಾನ್ ಪ್ರೈಂನಲ್ಲಿ ಸಿಗಲಿದೆ ಫ್ರೆಂಚ್ ಬಿರಿಯಾನಿ!

ಕೊರೋನಾದಿಂದ ಸಿನಿಮಾ ಥಿಯೇಟರ್’ಗಳೆಲ್ಲ ಮುಚ್ಚಿದ ಪರಿಣಾಮ ಮನರಂಜನೆ ಅಮೇಜಾನ್ ಪ್ರೈಂನ ಪಾಲಾಗಿದ್ದು, ಇದರಲ್ಲಿ ಜುಲೈ 24ರಂದು ಫ್ರೆಂಚ್ ಬಿರಿಯಾನಿ ಪ್ರೇಕ್ಷಕರ ತಟ್ಟೆಗೆ ಬರಲಿದೆ.
ಹೌದು, ಕನ್ನಡದ ಬಹುನೀರಿಕ್ಷಿತ ಅಪ್ಪಟ ಕಾಮಿಡಿ ಚಿತ್ರ ಫ್ರೆಂಚ್ ಬಿರಿಯಾನಿ ಜುಲೈ 24ರಂದು ತೆರೆಗೆ ಬರಲು ಸಿದ್ಧವಾಗಿದೆ. ಫ್ರೆಂಚ್ ನಾಗರೀಕನೊಬ್ಬ ಬೆಂಗಳೂರಿಗೆ ಬಂದು ಶಿವಾಜಿನಗರದ ಅಟೋ ಚಾಲಕನನ್ನು ಭೇಟಿ ಮಾಡಿದ ಬಳಿಕ ಮೂರು ದಿನದಲ್ಲಿ ನಡೆಯುವ ಘಟನೆ ಆಧರಿಸಿ ನಿರ್ಮಾಣಗೊಂಡ ಈ ಚಿತ್ರ ಒಟಿಟಿ ಮೂಲಕ ತೆರೆಗೆ ಬರಲಿದೆ.

4 ಸರ್ಕಾರಿ ಶಾಲೆ ದತ್ತು ಪಡೆದ ಸ್ಯಾಂಡಲ್​​ವುಡ್​ ಬಾದ್’ಷಾ

ಮಾರ್ಚ್ ನಲ್ಲಿ ತೆರೆಗೆ ಬರಬೇಕಿದ್ದ ಚಿತ್ರ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಳಂಬಗೊಂಡಿತ್ತು. ಕವಲುದಾರಿ,ಮಾಯಾ ಬಜಾರ್ ನಂತ ಚಿತ್ರ ನೀಡಿದ ಪಿಆರ್ ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣಗೊಂಡಿದ್ದು, ನಟ ಡ್ಯಾನಿಶ್ ಸೇಟ್ ಅಟೋ ಚಾಲಕನ ಪಾತ್ರದಲ್ಲಿ ನಾಯಕನಾಗಿ ನಟಿಸಿದ್ದರೇ, ಸ್ಯಾಲ್ ಯುಸೂಫ್ ಫ್ರೆಂಚ್ ‌ಪ್ರಜೆಯಾಗಿ ಕಾಣಿಸಿಕೊಂಡಿದ್ದಾರೆ.
ರಂಗಾಯಣ ರಘು, ನಾಗಭೂಷಣ್, ಸಿಂಧು ಶ್ರೀನಿವಾಸ ಮೂರ್ತಿ ಮುಖ್ಯ ಭೂಮಿಕೆಯಲ್ಲಿದ್ದಾರೆ.
ನಟ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ಚಿತ್ರ ನಿರ್ಮಾಣಕ್ಕೆ ಹಣ ಹೂಡಿದ್ದು ಅವಿನಾಶ್ ಬೆಳಕ್ಕಳ ಕತೆ‌, ಚಿತ್ರಕತೆ, ವಾಸುಕಿ ವೈಭವ್ ಸಂಗೀತ, ದೀಪು ಕುಮಾರ್ ಸಂಕಲನವಿದೆ.

ಮತ್ತಷ್ಟು ಸುದ್ದಿಗಳು

Latest News

ವೆಬ್ ಸಿರೀಸ್’ಗೆಂದು ಚಿತ್ರೀಕರಣ: ಪೋರ್ನ್ ಸೈಟ್’ನಲ್ಲಿ ರಿಲೀಸ್, ದೂರು ನೀಡಿದ ಮಾಡೆಲ್

newsics.com ಮುಂಬೈ: ಮಾಡೆಲ್ ಒಬ್ಬರನ್ನು ವೆಬ್ ಸಿರೀಸ್ ಎಂದು ನಂಬಿಸಿ ನಿಕಟ ದೃಶ್ಯಗಳನ್ನು ಚಿತ್ರೀಕರಿಸಿ ಪೋರ್ನ್ ಸೈಟಲ್ಲಿ ಬಿಡುಗಡೆ ಮಾಡಿರುವ ಪ್ರಕರಣ ಮುಂಬೈನಲ್ಲಿ ಬೆಳಕಿಗೆ ಬಂದಿದೆ. 24 ವರ್ಷದ...

ಸಹಕಾರ ಬ್ಯಾಂಕಿಗೆ ವಂಚನೆ: ಇಡಿಯಿಂದ ಮಾಜಿ ಶಾಸಕನ ಬಂಧನ

newsics.com ಮುಂಬೈ: ಸಹಕಾರ ಬ್ಯಾಂಕಿಗೆ 512.54 ಕೋಟಿ ರೂ. ವಂಚಿಸಿ ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಶಾಸಕ ವಿವೇಕಾನಂದ ಎಸ್‌. ಪಾಟೀಲ್‌ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ. ರಾಯಘಡ ಜಿಲ್ಲೆಯ...

ರೈಲು ಹತ್ತಲು ಪ್ಲಾಟ್‌ಫಾರ್ಮ್ ಟಿಕೆಟ್ ಅಷ್ಟೇ ಸಾಕು! ರೈಲಲ್ಲೇ ಟಿಕೆಟ್ ಸಿಗತ್ತೆ

newsics.com ನವದೆಹಲಿ: ನಿಮ್ಮ ಬಳಿ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್ ಇದ್ದರೆ ನೀವು ರೈಲು ಹತ್ತಬಹುದು. ಬಳಿಕ ರೈಲಿನಲ್ಲೇ ಟಿಟಿಇಯಿಂದ ಟಿಕೆಟ್ ಪಡೆಯಬಹುದು. ಹೌದು, ಇಂತಹದೊಂದು ಅವಕಾಶವನ್ನು ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಕಲ್ಪಿಸಿದೆ. ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸದಿದ್ದರೂ,...
- Advertisement -
error: Content is protected !!