newsics.com
ಮುಂಬೈ: ದೇವಸ್ಥಾನಕ್ಕೆ ಹುಡುಗಿಯೊಬ್ಬಳು ತುಂಡುಡುಗೆ ಧರಿಸಿಕೊಂಡು ಬಂದಿರುವ ಫೋಟೋವನ್ನು ಟ್ವೀಟ್ ಮಾಡಿದ್ದರು. ಬಾಲಿವುಡ್ ನಟಿ ಕಂಗನಾ ರಣಾವತ್ ಪಾಠ ಮಾಡಿದ್ದಾರೆ.
ದೇವಸ್ಥಾನಕ್ಕೆ ಹುಡುಗಿಯೊಬ್ಬಳು ತುಂಡುಡುಗೆ ಧರಿಸಿಕೊಂಡು ಬಂದಿರುವ ಫೋಟೋವನ್ನು ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ ತಮಗಾದ ಅನುಭವವನ್ನೂ ಅವರು ಹಂಚಿಕೊಂಡಿದ್ದಾರೆ.
‘ನಾನು ಶಾರ್ಟ್ಸ್ ಮತ್ತು ಟೀ ಶರ್ಟ್ ಧರಿಸಿ ವ್ಯಾಟಿಕನ್ ಸಿಟಿಗೆ ಹೋಗಿದ್ದೆ. ನನಗೆ ಆವರಣದ ಒಳಗೂ ಬಿಡಲಿಲ್ಲ. ನಂತರ ಹೋಟೆಲ್ ವೊಂದಕ್ಕೆ ಹೋಗಿ ಬಟ್ಟೆ ಬದಲಿಸಿಕೊಂಡು ಹೋಗಬೇಕಾಯಿತು’ ಎಂದಿದ್ದಾರೆ ಕಂಗನಾ. ರಾತ್ರಿ ಧರಿಸುವಂತ ಬಟ್ಟೆಗಳನ್ನು ಸೋಮಾರಿಗಳು ಎಲ್ಲಲ್ಲೂ ಬಳಸುತ್ತಾರೆ ಎಂದು ಟೀಕಿಸಿದ್ದಾರೆ.
ದೇವಸ್ಥಾನದಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಿಕೊಂಡು ಬರಬೇಕು ಎನ್ನುವ ಅರಿವು ಕೂಡ ಜನರಿಗೆ ಇರಬೇಕು. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ನೆನಪಿಸಿಕೊಂಡು ಅದಕ್ಕೆ ಒಪ್ಪಬಹುದಾದ ಬಟ್ಟೆಗಳನ್ನು ಧರಿಸಬೇಕು ಎಂದು ಅವರು ಬರೆದುಕೊಂಡಿದ್ದಾರೆ.
ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಸಂಸ್ಥಾಪಕನ ಮಗ ಜೇ ಕೋಟಕ್ ಕೈ ಹಿಡಿಯಲಿದ್ದಾರೆ ಮಿಸ್ ಇಂಡಿಯಾ ಅದಿತಿ ಆರ್ಯ