newsics.com
ಬೆಂಗಳೂರು: ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾ `ಗುರುದೇವ್ ಹೊಯ್ಸಳ’ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ನಿರ್ಮಾಪಕರು ನಟನಿಗೆ ದುಬಾರಿ ಕಾರನ್ನು ಉಡುಗೊರೆ ನೀಡಿದ್ದಾರೆ.
25ನೇ ಸಿನಿಮಾ ರಿಲೀಸ್ ಆಗಿರುವ ಶುಭ ಸಂದರ್ಭದಲ್ಲಿ ಡಾಲಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ಈ ಮೂಲಕ ಡಾಲಿ ಇದೀಗ ಕೋಟಿ ಕಾರಿನ ಒಡೆಯನಾಗಿದ್ದಾರೆ. ಈ ಕುರಿತು ಡಾಲಿ ಸೋಷಿಯಲ್ ಮೀಡಿಯಾದಲ್ಲಿ ಖುಷಿ ಸುದ್ದಿ ಹೇಳಿಕೊಂಡಿದ್ದಾರೆ. ಅವರಿಗೆ ದುಬಾರಿ ಬೆಲೆಯ Toyota Vellfire ಕಾರನ್ನು ಚಿತ್ರದ ನಿರ್ಮಾಪಕರಾದ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಉಡುಗೊರೆ ನೀಡಿದ್ದಾರೆ.
ಅಂದಾಜು 1.50 ಕೋಟಿ ರೂ. ಮೌಲ್ಯದ ಟೊಯೋಟಾ ಕಂಪೆನಿಯ ಕಾರು ಇದಾಗಿದೆ. ‘ಧನು, ರತ್ನನ್ ಪ್ರಪಂಚ, ಗುರುದೇವ್ ಹೊಯ್ಸಳ ಎಲ್ಲವೂ ನಮಗೆ ಒಂದೇ. ದೂರದ ಪ್ರಯಾಣ ಅಥವಾ ಸಣ್ಣ ಪ್ರಯಾಣ, ನಮಗೆ ಪ್ರಯಾಣ ಮುಖ್ಯವಾಗಿದೆ. ನಮ್ಮ ಜೀವನದ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಲವ್ ಯು ಸಹೋದರ’ ಎಂದು ಯೋಗಿ ಜಿ. ರಾಜ್ ಟ್ವೀಟ್ ಮಾಡಿದ್ದಾರೆ.