newsics.com
ಜೈಪುರ: ಕನ್ನಡದ ಬಿಂದಾಸ್ ಚಿತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನ ಗೆದ್ದಿರುವ ನಟಿ ಹನ್ಸಿಕಾ ಮೊಟ್ವಾನಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಬಹು ಕಾಲದ ಗೆಳೆಯ ಸೋಹೈಲ್ ಕಥುರಿಯಾ ವರ. ರಾಜಸ್ತಾನದ ಮುಂಡೋಟಾ ಕೋಟೆಯಲ್ಲಿ ಅತ್ಯಂತ ವೈಭವದಿಂದ ಮದುವೆ ನಡೆದಿದೆ.
ಇದೀಗ ಮದುವೆಯ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ಹನ್ಸಿಕಾ ರಾಜ ಕುಮಾರಿಯಂತೆ ಚಿತ್ರದಲ್ಲಿ ಕಂಗೊಳಿಸುತ್ತಿದ್ದಾಳೆ.
ಹನ್ಸಿಕಾ ಮ್ತತು ಸೋಹೈಲ್ ಕುಟುಂಬದ ಆಪ್ತ ಸಂಬಂಧಿಕರು ಈ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.