newsics.com
ಮುಂಬೈ: ರೇವ್ ಪಾರ್ಟಿ ಆರೋಪಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ನಟ ಹೃತಿಕ್ ರೋಷನ್ ಬೆಂಬಲ ಘೋಷಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲ ತಾಣದಲ್ಲಿ ಉದ್ದನೆಯ ಫೋಸ್ಟ್ ಮಾಡಿದ್ದಾರೆ. ಅತ್ಯಂತ ಭಾವನಾತ್ಮಕವಾಗಿ ಬರೆದಿದ್ದಾರೆ.
ಜೀವನ ಎನ್ನುವುದು ಒಂದು ನಿಗೂಢ ಪಯಣ, ಇಲ್ಲಿ ಹಲವು ಬಾರಿ ಹಲವು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತಿದೆ. ಅನಿರೀಕ್ಷಿತ ಸವಾಲು ಎದುರಾಗುತ್ತಿವೆ. ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕು.. ನನ್ನ ಪ್ರೀತಿಯ ಆರ್ಯನ್ ಎಂದು ಹೃತಿಕ್ ರೋಷನ್ ಹೇಳಿದ್ದಾರೆ.
ಈ ಹಿಂದೆ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸೂಸೈನ್ ಖಾನ್ ಕೂಡ ಆರ್ಯನ್ ಖಾನ್ ಗೆ ಬೆಂಬಲ ಸೂಚಿಸಿದ್ದರು.