ಫ್ರಾನ್ಸ್: ಜಗತ್ತಿನ ಪ್ರಸಿದ್ಧ ಸಿನಿ ಉತ್ಸವ ಕಾನ್ ಫೆಸ್ಟಿವಲ್ ಆರಂಭಗೊಂಡಿದೆ. ಜಗತ್ತಿನ ವಿವಿಧ ತಾರೆಯರು ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದಾರೆ.
ಈ ನಡುವೆ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆಯರು ಭಾಗಿಯಾಗಿದ್ದಾರೆ. ಇದೀಗ ಕಾನ್ ಫೆಸ್ಟಿವಲ್ನಲ್ಲಿ ಭಾಗಿಯಾಗಿರುವ ಸಿನಿಮಾ ತಾರೆಯರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೂಜಾ ಹೆಗ್ಡೆ, ತಮನ್ನಾ ಭಾಟಿಯಾ, ಮಾಧವನ್, ನಯನತಾರಾ, ನಟಿ ಊರ್ವಶಿ ಬಾಲಿವುಡ್ ಸ್ಟಾರ್ ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ತಾರೆಯರು ರಂಗು ರಂಗಿನ ಉಡುಗೆ ತೊಟ್ಟು ಮಿಂಚಿದ್ದಾರೆ.
ಇನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಾನ್ ಚಲನಚಿತ್ರೋತ್ಸವ ಜ್ಯೂರಿಯಾಗಿ ಆಯ್ಕೆಯಾಗಿದ್ದಾರೆ. ಇಂದು ಈ ಬಾರಿಯ ವಿಶೇಷತೆಯಾಗಿದೆ.