Newsics. Com
ಮುಂಬೈ: ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ಎಲ್ಲ ಅಡೆತಡೆಗಳನ್ನು ನೂಕಿಕೊಂಡು ರಿಲೀಸ್ ಆದ ಮೂರೇ ಮೂರು ದಿನಕ್ಕೆ 150 ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಿಂದ ಕೊಳ್ಳೆ ಹೊಡೆದಿದೆ.
ನಟಿ ಕಂಗನಾ ರಣಾವತ್ ಶಾಕಿಂಗ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪಠಾಣ್ ಸಿನಿಮಾ ಈ ಪ್ರಮಾಣದಲ್ಲಿ ಗೆಲ್ಲಲು ಐ.ಎಸ್.ಐ (ISI) ಕಾರಣವೆಂದು ಹೇಳಿದ್ದಾರೆ.
ನಿರೀಕ್ಷೆಗೂ ಮೀರಿ ಪಠಾಣ್ ಸಿನಿಮಾ ಗೆದ್ದಿರುವುದಕ್ಕೆ ದಿನಕ್ಕೊಂದು ಕಾರಣವನ್ನು ಕೊಡುತ್ತಿದ್ದಾರೆ ನಟಿ ಕಂಗನಾ . ಐಎಸ್ಐ ಕೈವಾಡ ಸೇರಿದಂತೆ ಅನೇಕ ಆರೋಪಗಳನ್ನು ಅವರು ಮಾಡಿದ್ದಾರೆ. ಆದರೆ, ಶಾರುಖ್ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.