ಬೆಂಗಳೂರು: ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ದಿ. ನರಸಿಂಹರಾಜು ಅವರ ಸ್ಮಾರಕ ನಿರ್ಮಾಣ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ ಎಂದು ನಟ ಜಗ್ಗೇಶ್ ತಿಳಿಸಿದ್ದಾರೆ.
ಟ್ವಿಟರ್ ನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಜಗ್ಗೇಶ್, ತಿಪಟೂರಿನಲ್ಲಿ ನರಸಿಂಹರಾಜು ಅವರ ಸ್ಮಾರಕ ನಿರ್ಮಿಸುವುದಾಗಿ ಅವರ ಪತ್ನಿಗೆ ನೀಡಿದ ಭರವಸೆಯಂತೆ ಕಾರ್ಯ ನಡೆಯುತ್ತಿದೆ. .ನಾನು ಹಾಗೂ ನನ್ನ ಗೆಳೆಯ, ಶಾಸಕ ನಾಗೇಶ್ ರವರು ಆ ಕಾರ್ಯದ ಬಗ್ಗೆ ವಿಶೇಷ ಆಸಕ್ತಿವಹಿಸಿದ್ದೇವೆ. ಕಳೆದ ವಾರವಷ್ಟೇ ನರಸಿಂಹರಾಜು ಅವರ ಮಡದಿಗೆ ಸಂಪೂರ್ಣ ಮಾಹಿತಿ ನೀಡಿರುವೆ.. ನಗಿಸಿದ ದೇವರಿಗೆ ಸ್ಮಾರಕ ನಿರ್ಮಿಸುವುದು ಖಚಿತ ಎಂದಿದ್ದಾರೆ.