ಮುಂಬೈ: ಖ್ಯಾತ ಗೀತ ರಚನೆಕಾರ ಜಾವೇದ್ ಅಖ್ತರ್ ಮೊನ್ನೆ ತಾನೇ 75ನೇ ಹುಟ್ಟು ಹಬ್ಬ ಆಚರಿಸಿದರು. ಇದೀಗ ತಮ್ಮ ಜೀವನದ ಸುದೀರ್ಘ ಇನ್ನಿಂಗ್ಸ್ ನ ಮೆಲುಕು ಹಾಕಿರುವ ಅಖ್ತರ್, ಆ 10 ವರ್ಷದ ಕುರಿತು ಮಾತನಾಡಿದ್ದಾರೆ. 10 ವರ್ಷ ನಾನು ಏನ್ನನ್ನು ಮಾಡಿಲ್ಲ. ಕುಡಿದು ಕುಡಿದು ಜೀವನ ಹಾಳು ಮಾಡಿದೆ. ಆ ಸಮಯವನ್ನು ಇನ್ನಷ್ಟು ರಚನಾತ್ಮಕವಾಗಿ ಬಳಸ ಬಹುದಿತ್ತು ಎಂದು ನನಗನಿಸುತ್ತಿದೆ ಎಂದು ಅಖ್ತರ್ ತಮ್ಮ ಪ್ರಾಮಾಣಿಕ ಅಭಿಪ್ರಾಯ ದಾಖಲಿಸಿದ್ದಾರೆ