newsics.com
ಇತ್ತೀಚೆಗೆ ಗುಡ್ ನ್ಯೂಸ್ ಕೊಡುವುದಾಗಿ ಹೇಳಿದ್ದ ಕನ್ನಡ ಕಿರುತೆರೆ ನಟಿ ಜ್ಯೋತಿರೈ ಇದೀಗ 2ನೇ ಮದುವೆಗೆ ಸಿದ್ಧವಾಗಿದ್ದಾರೆ ಎನ್ನಲಾಗ್ತಿದೆ. ನಟಿ ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು, ಈ ವಿಚಾರವನ್ನು ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತೆಲುಗು ನಿರ್ದೇಶಕ ಸುಕು ಪೂರ್ವಜ್ ಜತೆ ಎಂಗೇಜ್ ಮೆಂಟ್ ಆಗಿದೆ ಎಂದು ಜ್ಯೋತಿ ಬರೆದುಕೊಂಡಿದ್ದಾರೆ. ಆದರೆ ಜ್ಯೋತಿ ರೈ ಕುತ್ತಿಗೆಯಲ್ಲಿ ಕರಿಮಣಿ ಕಾಣಿಸುತ್ತಿದ್ದು ಈಗಾಗಲೇ ಅವರಿಗೆ ಮದುವೆ ಆಗಿದೆ, ಬಹುಶ: ಇದು ಹಳೆಯ ಫೋಟೋಗಳಿರಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಜ್ಯೋತಿ ರೈ ಮದುವೆ ಆಗಿದ್ದು ಒಬ್ಬ ಮಗ ಕೂಡಾ ಇದ್ದಾನೆ. ಆದರೆ ಮೊದಲ ಪತಿಯಿಂದ ಜ್ಯೋತಿ ದೂರಾಗಿದ್ದು ನಿರ್ದೇಶಕ ಸುಕು ಪೂರ್ವಜ್ ಜೊತೆ ಡೇಟಿಂಗ್ ಮಾಡುತ್ತಿರಬಹುದು ಎನ್ನಲಾಗಿತ್ತು. ಇದೀಗ ಸ್ವತ: ಜ್ಯೋತಿ ತಮ್ಮ ನಡುವಿನ ಸಂಬಂಧವನ್ನು ಕನ್ಫರ್ಮ್ ಮಾಡಿದ್ದಾರೆ.