Tuesday, April 13, 2021

ಗೆಳತಿ, ಏನೀ ಅದ್ಭುತವೇ…?

ಗ ಎಲ್ಲೆಲ್ಲೂ ‘ಏನೀ ಅದ್ಭುತವೇ ಗೆಳತಿ’ ಎಂದು ಕೇಳುವವರೇ…
ಅವರ ಭಾವಾಭಿನಯ, ಭಾವಾಭಿವ್ಯಕ್ತಿ, ಸುಮಧುರ ಗಾಯನ ಎಲ್ಲವೂ ಅದ್ಭುತವೇ…
ಮಧ್ಯಮ ವರ್ಗದ ಗೃಹಿಣಿಯೊಬ್ಬರು ತನ್ನ ಅನುಭವಗಳನ್ನು ಗೆಳತಿಯೊಂದಿಗೆ ಹಂಚಿಕೊಳ್ಳುವ ಸನ್ನಿವೇಶವನ್ನು ಭಾವ, ಅಭಿನಯದ ಮೂಲಕ ಅಭಿವ್ಯಕ್ತಿಗೊಳಿಸಿದ್ದಾರೆ. ಸಣ್ಣ ಸಣ್ಣ ಕೌತುಕಗಳನ್ನೇ ಅದ್ಭುತ ಎನ್ನುವಂತೆ ಭಾವಾಭಿನಯ ತೋರಿದ್ದಾರೆ ಉಡುಪಿಯ ಪ್ರಸಿದ್ಧ ಭರತನಾಟ್ಯ ಕಲಾವಿದೆ ಹಾಗೂ ವಿದುಷಿ ಮಾನಸಿ ಸುಧೀರ್‌. ಮಾನಸಿ, ಸಾಹಿತಿ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ ಅವರ ಮಗಳು. ಅಷ್ಟೇ ಅದ್ಭುತವಾಗಿ ಸಾಹಿತ್ಯ ಸೃಷ್ಟಿಸಿದ್ದಾರೆ, ಖ್ಯಾತ ಕವಿ ಬಿ.ಆರ್.ಲಕ್ಷ್ಮಣ್‌ ರಾವ್. ಗುರುರಾಜ ಮಾರ್ಪಳ್ಳಿ ರಾಗ ಸಂಯೋಜಿಸಿದ್ದಾರೆ.
‘ಏನೀ ಅದ್ಭುತವೇ’ ಗೀತೆಯನ್ನು ಇದುವರೆಗೂ ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಈ ಮೂಲಕ ಕನ್ನಡ ಗೀತಾ ಲೋಕದಲ್ಲಿ ದಾಖಲೆಯೇ ನಿರ್ಮಾಣವಾಗಿದೆ. ಇದಕ್ಕೆಲ್ಲ ಲಾಕ್’ಡೌನ್ ಸಮಯವೇ ಕಾರಣ ಎಂದಿದ್ದಾರೆ ವಿದುಷಿ ಮಾನಸಿ. ತಾಳಕ್ಕೆ ಹೆಜ್ಜೆ ಹಾಕುವ ಬದಲಿಗೆ ಸಾಹಿತ್ಯಕ್ಕೆ ದನಿಗೂಡಿಸಿದೆ ಎನ್ನುವ ಮಾನಸಿ ಸುಧೀರ್, ಬೇಂದ್ರೆಯವರ ‘ಭೃಂಗದ ಬೆನ್ನೇರಿ’ಗೂ ದನಿಗೂಡಿಸಿದ್ದಾರೆ. ಲಕ್ಷ್ಮಣ್‌ ರಾವ್ ಅವರ ‘ಹೇಗಿದ್ದೀಯೇ ಟ್ವಿಂಕಲ್’ ಹಾಡು ಹೆಚ್ಚು ವೈರಲ್ ಆಗಿತ್ತು. ಡುಂಡಿರಾಜ್ ಅವರ ‘ಗಣ್ಯರಾಜ್ಯದ ಗುಣಗಾನ’, ತಿರುಮಲೇಶ್ ಅವರ ‘ಎಲ್ಲಿಗೆ ಹೋಗೋಣ’ ಗೀತೆಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಏನೀ ಅದ್ಭುತವೇ ಹಾಡಿನಿಂದಾಗಿ ಮಾನಸಿಯವರಿಗೆ ಸಿನಿಮಾ ಆಫರ್ ಕೂಡ ಬಂದಿದೆಯಂತೆ.
ಈ ಹಾಡನ್ನು ನೀವೂ ಕೇಳಿ ‘ಏನೀ ಅದ್ಭುತವೇ…’ ಎಂದುಬಿಡಿ ಈಗಲೇ.

ಮತ್ತಷ್ಟು ಸುದ್ದಿಗಳು

Latest News

ಕುರಾನ್’ನಲ್ಲಿನ 26 ವಚನ ತೆಗೆಯಬೇಕೆಂಬ ಅರ್ಜಿ ವಜಾಗೊಳಿಸಿದ ಸುಪ್ರೀಂ

newsics.comನವದೆಹಲಿ: ಕುರಾನ್‌ನಲ್ಲಿನ 26 ವಚನಗಳನ್ನು ತೆಗೆಯುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.ಅರ್ಜಿಯು ಗಂಭೀರ ಉದ್ದೇಶ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಜಿದಾರರಿಗೆ 50...

ದೋಣಿ ಮುಳುಗಿ 34 ವಲಸಿಗರ ಸಾವು

newsics.comಜಿಬೂಟಿ: ವಲಸಿಗರನ್ನು ಹೊತ್ತ ದೋಣಿಯೊಂದು ಸಮುದ್ರದಲ್ಲಿ ಮುಳುಗಿ 34 ಮಂದಿ ಮೃತಪಟ್ಟಿದ್ದಾರೆ.ಆಫ್ರಿಕಾ ಖಂಡದ ಜಿಬೂಟಿ ದೇಶದ ಕರಾವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ...

ಮಹಾರಾಷ್ಟ್ರದಲ್ಲಿ 51,751 ಮಂದಿಗೆ ಕೊರೋನಾ ಸೋಂಕು 258 ಜನ‌ ಸಾವು

newsics.comಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 51,751 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 258 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಪ್ರಯೋಗಾಲಯಕ್ಕೆ ಬಂದಿದ್ದ 2,33,22,393 ಸ್ಯಾಂಪಲ್‌ಗಳ ಪೈಕಿ 34,58,996 ಮಂದಿಗೆ ಕೊರೋನಾ...
- Advertisement -
error: Content is protected !!