newsics.com
ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾಗಿ ವರ್ಷವಾದ ಬೆನ್ನಲ್ಲೇ ಅವರು ಯಾವಾಗ ಗುಡ್ನ್ಯೂಸ್ ಕೊಡುತ್ತಾರೆ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದರು. ಈಗ ಇನ್ಸ್ಟಾದಲ್ಲಿ ಒಂದು ಗುಡ್ನ್ಯೂಸ್ ಕೊಟ್ಟಿದ್ದಾರೆ.
ಏಳು ಬೆರಳುಗಳನ್ನು ತೋರಿಸಿ ಖುಷಿ ಹಂಚಿಕೊಂಡಿದ್ದಾರೆ ಕತ್ರಿನಾ. ಈಕೆ ಖುಷಿಯಿಂದ ನಗುತ್ತಿರುವ ಫೋಟೋ ಇನ್ಸ್ಟಾದಲ್ಲಿ ಕಾಣಬಹುದು.
ಹಾಗಿದ್ದರೆ ಏನಿದು ಗುಡ್ನ್ಯೂಸ್? ಗುಡ್ನ್ಯೂಸ್ ಸದ್ಯ ಅಭಿಮಾನಿಗಳು ಕಾಯುತ್ತಿರುವಂತೆ ಅಮ್ಮನಾಗುವ ಸುದ್ದಿಯಲ್ಲ, ಬದಲಿಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 70 ಮಿಲಿಯನ್ ಫಾಲೋವರ್ಸ್ ಆದರು ಎಂಬ ಬಗ್ಗೆ ಸಂತೋಷ ಹಂಚಿಕೊಂಡಿದ್ದಾರೆ.