newsics.com
ಬೆಂಗಳೂರು: ನಟಿ ಕಾವ್ಯಶ್ರೀ ಗೌಡ ಅವರ ಬಿಗ್ ಬಾಸ್ ಮನೆ ಆಟಕ್ಕೆ ಈ ವಾರ ಬ್ರೇಕ್ ಬಿದ್ದಿದೆ.
ದೀಪಿಕಾ ದಾಸ್, ಪ್ರಶಾಂತ್ ಸಂಬರಗಿ, ಅರುಣ್ ಸಾಗರ್, ಕಾವ್ಯಶ್ರೀ ಗೌಡ, ಅಮೂಲ್ಯ ಗೌಡ, ಅನುಪಮಾ ಗೌಡ, ಆರ್ಯವರ್ಧನ್ ಗುರೂಜಿ, ದಿವ್ಯಾ ಉರುಡುಗ, ರೂಪೇಶ್ ಶೆಟ್ಟಿ.. ಈ 9 ಮಂದಿ ಮೇಲೆ ಎಲಿಮಿನೇಷನ್ ತೂಗುಗತ್ತಿ ನೇತಾಡುತ್ತಿತ್ತು. ಕೊನೆಗೂ ಈ 9 ಮಂದಿಯಲ್ಲಿ ಕಾವ್ಯಶ್ರೀ ಗೌಡ ಅವರು ಮನೆಯಿಂದ ಹೊರನಡೆದಿದ್ದಾರೆ
ಸಾನ್ಯ ಅಯ್ಯರ್, ವಿನೋದ್ ಗೊಬ್ಬರಗಾಲ, ಎಲಿಮಿನೇಷನ್ ನಂತರ ಇದೀಗ ಕಾವ್ಯಶ್ರೀ ಔಟ್ ಆಗಿರೋದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ. ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ನಟಿ ಬಿಗ್ ಬಾಸ್ ಆಟ ಕೊನೆಯಾಗಿದೆ.