ಮುಂಬೈ: ಖ್ಯಾತ ನಟಿ ಕೀರ್ತಿ ಸುರೇಶ್ ಮೈದಾನ ಹಿಂದಿ ಚಲನಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ಅಜಯ್ ದೇವಗನ್ ಈ ಚಿತ್ರದ ನಾಯಕ. ಈ ಮೊದಲು ನಾಯಕಿ ಪಾತ್ರಕ್ಕೆ ಕೀರ್ತಿ ಸುರೇಶ್ ಆಯ್ಕೆ ಮಾಡಲಾಗಿತ್ತು. ದೇವಗನ್ ಎದುರು ಕೀರ್ತಿ ಚಿಕ್ಕವಳಂತೆ ಕಂಡು ಬರುವ ಸಾಧ್ಯತೆಯಿದೆ. ಇದರಿಂದಾಗಿ ಈ ಚಿತ್ರದಿಂದ ಕೀರ್ತಿ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ಭೋನಿ ಕಪೂರ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ