ಮುಂಬೈ: ಪ್ರಸಕ್ತ ದಿವಾಳಿ ದೊರೆ ವಿಜಯ ಮಲ್ಯ ಈ ಹಿಂದೆ ತಮ್ಮ ಐಷಾರಾಮಿ ಬದುಕಿಗೆ ಹೆಸರುವಾಸಿಯಾಗಿದ್ದವರು. ಹತ್ತು ಹಲವು ಅಭಿರುಚಿ, ಹವ್ಯಾಸ. ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ವಿಜಯ ಮಲ್ಯ , ಭಾರತದ ಸಾಂಪ್ರದಾಯಿಕ ಕ್ಯಾಲೆಂಡರ್ ಗೆ ಗ್ಲಾಮರ್ ಟಚ್ ನೀಡಿದ್ದರು. ಕಿಂಗ್ ಫಿಶರ್ ಕ್ಯಾಲೆಂಡರ್ ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಗಳಿಸಿತ್ತು. ಭಾರತದ ಖ್ಯಾತ ರೂಪದರ್ಶಿಗಳಲ್ಲಿ ಹೆಚ್ಚಿನವರು ಈ ಹಿಂದೆ ಇದೇ ಕ್ಯಾಲೆಂಡರ್ ಮೂಲಕವೇ ಬೆಳಕಿಗೆ ಬಂದವರು. ಇದೀಗ ಕಿಂಗ್ ಫಿಶರ್ ಕ್ಯಾಲೆಂಡರ್ ಗೆ 2020 ಮಹತ್ವದ ವರ್ಷ. 18ರ ಸಂಭ್ರಮ. ಈ ಬಗ್ಗೆ ಟ್ವೀಟ್ ಮಾಡಿರುವ ಕಿಂಗ್ ಫಿಶರ್ ಕ್ಯಾಲೆಂಡರ್ ಅಚ್ಚರಿ ಕಾದಿದೆ ಎಂದಿದೆ. ವಿಜಯ ಮಲ್ಯ ಕೂಡ ಇದಕ್ಕೆ ಲೈಕ್ ಮಾಡಿದ್ದಾರೆ.