ಕನ್ನಡ ಸಿನಿಮಾಗಳಲ್ಲಿ ಸಂಯುಕ್ತ ನಟಿಸದೇ ಇದ್ದರೂ ಪರಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ತಮಿಳು , ತೆಲುಗು ಭಾಷೆಗಳಲ್ಲಿ ಬ್ಯುಸಿ ಇದ್ದಾರೆ.
ಉತ್ತಮ ಡಾನ್ಸರ್ ಆಗಿರುವ ಸಂಯುಕ್ತ ಅವರ ತಮಿಳು ಚಿತ್ರ ‘ಥೀಲ್’ ಇದೇ 14ಕ್ಕೆ ರಿಲೀಸ್ ಆಗಿದೆ.
• ಅನಿತಾ ಬನಾರಿ
newsics.com@gmail.com
‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ನೀಡಿದ ಸಂಯುಕ್ತ ಹೆಗ್ಡೆ ಮೊದಲ ಚಿತ್ರದಲ್ಲೇ ಕನ್ನಡಿಗರ ಮನ ಗೆದ್ದಿದ್ದರು. ಕಿರಿಕ್ ಪಾರ್ಟಿಯಲ್ಲಿ ಎರಡನೇ ನಾಯಕಿಯಾಗಿ ನಟಿಸಿರುವ ಇವರಿಗೆ ಆ ಚಿತ್ರಕ್ಕೆ ಅವಾರ್ಡ್ ಕೂಡ ಸಿಕ್ಕಿತ್ತು.
ನಂತರ ‘ಕಾಲೇಜ್ ಕುಮಾರ್’ ಚಿತ್ರದಲ್ಲಿ ನಟಿಸಿದ ಬಳಿಕ ಕನ್ನಡದಲ್ಲಿ ನಟಿಸಿರಲಿಲ್ಲ. ಈಗ ಲಾಂಗ್ ಗ್ಯಾಪ್ನ ನಂತರ ಅಗ್ನಿ ಶ್ರೀಧರ್ ನಿರ್ದೇಶನದ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಕ್ಕೆ ಕಂ ಬ್ಯಾಕ್ ಆಗುತ್ತಿದ್ದಾರೆ ಸಂಯುಕ್ತಾ. ಇನ್ನು ಕನ್ನಡ ಸಿನಿಮಾಗಳಲ್ಲಿ ಸಂಯುಕ್ತಾ ನಟಿಸದೇ ಇದ್ದರೂ ಪರಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ತಮಿಳು, ತೆಲುಗು ಭಾಷೆಗಳಲ್ಲಿ ಬ್ಯುಸಿ ಇದ್ದಾರೆ.
ಉತ್ತಮ ಡಾನ್ಸರ್ ಆಗಿರುವ ಸಂಯುಕ್ತ ಅವರ ತಮಿಳು ಚಿತ್ರ ‘ಥೀಲ್’ ಇದೇ 14ಕ್ಕೆ ರಿಲೀಸ್ ಆಗಿದೆ. ಈ ಸಿನಿಮಾದ ವಿಡಿಯೋ ಸಾಂಗ್ ಯುಟ್ಯೂಬ್ನಲ್ಲಿ ರಿಲೀಸ್ ಆಗಿದ್ದು ಈ ಹಾಡಿನ ಬಗ್ಗೆ ಸಂಯುಕ್ತ ಸಾಮಾಜಿಕ ಜಾಲತಾಣದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ.
ಥೀಲ್ ಚಿತ್ರದಲ್ಲಿ ನಟ, ನೃತ್ಯ ಸಂಯೋಜಕ ಹಾಗೂ ನಿರ್ದೇಶಕ ಪ್ರಭುದೇವ ಅವರೊಂದಿಗೆ “ವಾಟುರ ಥೀಟುರ…” ಹಾಡಿನಲ್ಲಿ ಹೆಜ್ಜೆ ಹಾಕಿರುವ ಸಂಯುಕ್ತ ಈ ಹಾಡಿನ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಕನಸು ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
”ಚಿಕ್ಕ ವಯಸ್ಸಿನಲ್ಲಿ ಪ್ರಭುದೇವ ಅವರೊಂದಿಗೆ ಡಾನ್ಸ್ ಮಾಡಬೇಕೆಂಬ ಕನಸು ಕಂಡಿದ್ದೆ. ಈಗ ನನ್ನ ಕನಸು ಈಡೇರಿದೆ. ಪ್ರಭುದೇವ ಅವರನ್ನು ನೋಡಿ ನನಗೆ ಡಾನ್ಸ್ನಲ್ಲಿ ಆಸಕ್ತಿ ಹುಟ್ಟಿತು. ಅವರೊಂದಿಗೆ ಡಾನ್ಸ್ ಮಾಡಲು ಅವಕಾಶ ಸಿಕ್ಕಿದ್ದು ಹೆಮ್ಮೆ. ನನ್ನ ಕನಸು ನನಸಾದ ಕ್ಷಣ”ಎಂದು ಬರೆದುಕೊಂಡಿದ್ದಾರೆ.