newsics.com
ಗಲ್ಲಿ ಬಾಯ್ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಮೂಲಕ ಮತ್ತೊಮ್ಮೆ ಬೆಳ್ಳಿ ತೆರೆಗೆ ಎಂಟ್ರಿ ಕೊಡಲಿದ್ದಾರೆ. ಈ ಸಿನಿಮಾದ ಪ್ರಚಾರ ಕಾರ್ಯದ ನಿಮಿತ್ತ ಡಿಸ್ನಿ + ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿರುವ ಕಾಫಿ ವಿತ್ ಕರಣ್ ಸೀಸನ್ 7ರಲ್ಲಿ ಇಬ್ಬರೂ ಭಾಗಿಯಾಗಿದ್ದಾರೆ .
ಸಿನಿಮಾದ ನಿರ್ದೇಶಕ ಕೂಡ ಆಗಿರುವ ಕರಣ ಜೋಹರ್ ಈ ಕಾರ್ಯಕ್ರಮದಲ್ಲಿ ನಟಿ ಆಲಿಯಾ ಭಟ್ಗೆ ಮದುವೆ ಕುರಿತಂತೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಲ್ಲಿ ಮದುವೆ ಬಳಿಕ ನೀವು ಅರ್ಥಮಾಡಿಕೊಂಡ ವಿಚಾರ ಯಾವುದು ಎಂದು ಕೇಳಿದ್ದಕ್ಕೆ ನಟಿ ಆಲಿಯಾ ಮದುವೆಯಾದ ದಿನ ಫಸ್ಟ್ ನೈಟ್ ಅನ್ನೋದೆಲ್ಲ ಇರೋದಿಲ್ಲ. ಯಾಕೆಂದರೆ ನಿಮಗೆ ಸುಸ್ತಾಗಿರುತ್ತದೆ ಎಂದು ಹೇಳಿದ್ದಾರೆ.