ಮುಂಬೈ: ಇತ್ತೀಚೆಗೆ ಭಾರಿ ಸುದ್ದಿ ಮಾಡುತ್ತಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟನೆಯ ‘ಛಪಕ್’ ಚಿತ್ರಕ್ಕೆ ಈಗ ಕಾನೂನು ತೊಡಕು ಎದುರಾಗಿದೆ.
ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್ ವಾಲ್ ಜೀವನಾಧಾರಿತ ಚಿತ್ರದ ಬಿಡುಗಡೆಗೆ ಆರು ದಿನಗಳಿರುವಾಗಲೇ ಚಿತ್ರ ನಿರ್ಮಾಪಕ ರಾಕೇಶ್ ಭಾರ್ತಿ ಎಂಬುವರು ‘ಛಪಕ್’ ಚಿತ್ರದ ಕತೆ ತಾವು ಬರೆದ ಕಥೆಯನ್ನು ಆಧರಿಸಿದೆ ಎಂದು ಆರೋಪಿಸಿ ಚಿತ್ರ ನಿರ್ದೇಶಕಿ ಮೇಘನಾ ಗುಲ್ಜಾರ್ ವಿರುದ್ಧ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.