Monday, October 3, 2022

ಅತಿ ದೀರ್ಘಾವಧಿಯ ಬಿಗ್‌ಬಾಸ್ ನಾಳೆಯಿಂದ ಆರಂಭ: ಪಟ್ಟಕ್ಕಾಗಿ 18 ಸ್ಪರ್ಧಿಗಳ 100 ದಿನದ ಸೆಣಸಾಟ

Follow Us

newsics.com

ಬಿಗ್‌ಬಾಸ್‌ ಒಟಿಟಿ ಆವೃತ್ತಿ ಮುಗಿದ ಬೆನ್ನಲ್ಲೇ, 9ನೇ ಆವೃತ್ತಿಗೆ ವೇದಿಕೆ ಸಿದ್ಧವಾಗಿದ್ದು, ಪ್ರಸಿದ್ಧ ರಿಯಾಲಿಟಿ ಶೋ ಬಿಗ್‌ಬಾಸ್‌’ 9ನೇ ಆವೃತ್ತಿಯು ಸೆ.24ರ ಸಂಜೆ 6ರಿಂದ ಆರಂಭವಾಗಲಿದೆ.ಬಿಗ್‌ಬಾಸ್‌ ಇತಿಹಾಸದಲ್ಲೇ ಈ ಆವೃತ್ತಿಯು ಸುದೀರ್ಘವಾಗಿರಲಿದ್ದು, ಒಟ್ಟು 18 ಸ್ಪರ್ಧಿಗಳ ನಡುವೆ ಬಿಗ್‌ಬಾಸ್‌ ಪಟ್ಟಕ್ಕಾಗಿ

ಬಿಗ್‌ಬಾಸ್‌ ಇತಿಹಾಸದಲ್ಲೇ ಈ ಆವೃತ್ತಿಯು ಸುದೀರ್ಘವಾಗಿರಲಿದ್ದು, ಒಟ್ಟು 18 ಸ್ಪರ್ಧಿಗಳ ನಡುವೆ ಬಿಗ್‌ಬಾಸ್‌ ಪಟ್ಟಕ್ಕಾಗಿ ಸುಮಾರು ನೂರು ದಿನ ಸೆಣಸಲಿದ್ದಾರೆ.

ಸೆ.24, 25 (ಶನಿವಾರ ಹಾಗೂ ಭಾನುವಾರ)ರಂದು ನಟ ಕಿಚ್ಚ ಸುದೀಪ್ ಹದಿನೆಂಟೂ ಸ್ಪರ್ಧಿಗಳನ್ನು ಬಿಗ್‌ಬಾಸ್ ಮನೆಯೊಳಕ್ಕೆ ಕಳುಹಿಸಿಕೊಡಲಿದ್ದಾರೆ.

ಕಲರ್ಸ್‌ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಇದು ಪ್ರಸಾರವಾಗಲಿದೆ. 9ನೇ ಆವೃತ್ತಿ ವಿಶೇಷವೇನೆಂದರೆ 9 ಹೊಸ ಸ್ಪರ್ಧಿಗಳ ಜೊತೆಗೆ 9 ಅನುಭವಿ ಸ್ಪರ್ಧಿಗಳೂ ಕಣದಲ್ಲಿರುತ್ತಾರೆ. ಆದ್ದರಿಂದ ಈ ಆವೃತ್ತಿಯನ್ನು ‘ಪ್ರವೀಣರು ಮತ್ತು ನವೀನರ ಹಣಾಹಣಿ’ ಎಂದು ಕಲರ್ಸ್ ಚಾನೆಲ್ ಹೇಳಿಕೊಂಡಿದೆ.

9 ಅನುಭವಿ ಸ್ಪರ್ಧಿಗಳ ಪಟ್ಟಿಯಲ್ಲಿ ಒಟಿಟಿ ಆವೃತ್ತಿಯ ಟಾಪರ್‌ಗಳಾದ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಆರ್ಯವರ್ಧನ್‌ ಹಾಗೂ ಸಾನ್ಯಾ ಅಯ್ಯರ್ ಇರಲಿದ್ದಾರೆ. ಇವರ ಜತೆ ಹಿಂದಿನ ಬಿಗ್‌ಬಾಸ್ ಆವೃತ್ತಿಯಲ್ಲಿ ಆಡಿ ಜನಮೆಚ್ಚುಗೆ ಗಳಿಸಿದ ಐದು ಸ್ಪರ್ಧಿಗಳಾದ ಪ್ರಶಾಂತ್‌ ಸಂಬರಗಿ, ದೀಪಿಕಾ ದಾಸ್‌ ಹಾಗೂ ಅನುಪಮಾ ಗೌಡ ಮನೆ ಪ್ರವೇಶಿಸುವುದು ಖಚಿತವಾಗಿದ್ದು, ಇನ್ನುಳಿದವರು ಯಾರು ಎನ್ನುವ ಕುತೂಹಲವನ್ನು ಚಾನೆಲ್‌ ಉಳಿಸಿಕೊಂಡಿದೆ.

ಮೈಸೂರು ಅನಂತಸ್ವಾಮಿ ಸಂಯೋಜನೆಯ ದಾಟಿಯಲ್ಲೇ ನಾಡಗೀತೆ ಹಾಡಲು ಸರ್ಕಾರ ಸಮ್ಮತಿ

ಪೇಸಿಎಂ ಅಭಿಯಾನ: ಸಿದ್ದರಾಮಯ್ಯ, ಡಿಕೆಶಿ, ಸುರ್ಜೇವಾಲ ಪೊಲೀಸ್ ವಶಕ್ಕೆ

ಉಗಾಂಡಾದಲ್ಲಿ ಎಬೋಲಾ ವೈರಸ್ ಪತ್ತೆ: ಓರ್ವ ಸಾವು, 7 ಮಂದಿಗೆ ಸೋಂಕು

ಮುಂಬೈನಲ್ಲಿ ಮತ್ತೆ ಬಾಂಬ್ ಸ್ಫೋಟದ ಬೆದರಿಕೆ ಕರೆ: ಆತಂಕ ಸೃಷ್ಟಿ

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!