Newsics.com
ಚೆನ್ನೈ: ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರಕ್ಕೆ ಪೈರಸಿ ಕಾಟ ಎದುರಾಗಿದೆ. ಅಧಿಕೃತವಾಗಿ ಬಿಡುಗಡೆಯಾಗುವ ಮೊದಲೆ ಆನ್ ಲೈನ್ ನಲ್ಲಿ ಖದೀಮರು ಚಿತ್ರ ಸೋರಿಕೆ ಮಾಡಿದ್ದಾರೆ.
ಚಿತ್ರ ವಿತರಕರಿಗೆ ಏರ್ಪಡಿಸಲಾಗಿದ್ದ ವಿಶೇಷ ಪ್ರದರ್ಶನದ ವೇಳೆ ಸೆರೆ ಹಿಡಿದು ಚಿತ್ರ ಬಿಡುಗಡೆ ಮಾಡಲಾಗಿದೆ ಎಂದು ಚಿತ್ರತಂಡ ಆರೋಪಿಸಿದೆ.
ಕಳೆದ ಎರಡು ವರ್ಷಗಳಿಂದ ಪಟ್ಟ ಪರಿಶ್ರಮವನ್ನು ಹಾಳು ಮಾಡಿದ್ದಾರೆ ಎಂದು ನಿರ್ದೇಶಕ ಕಂಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಪೈರಸಿ ಚಿತ್ರ ವೀಕ್ಷಿಸದಂತೆ ಅವರು ಮನವಿಮಾಡಿದ್ದಾರೆ.