ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಇಷ್ಟವಾಯ್ತು ಎಂದಿರುವ ಟ್ವೀಟಿಗರು, 3.5 ರೇಟಿಂಗ್ ನೀಡಿದ್ದಾರೆ.
ಇಂದು ಮೊದಲ ಶೋ ನೋಡಿದ ಪ್ರೇಕ್ಷಕರು, ಸಿನಿಮಾದ ಸಂಗೀತ, ರಕ್ಷಿತ್ ಶೆಟ್ಟಿ ತಮಾಷೆ ಇಷ್ಟವಾಗಿದೆ. ಆದರೆ ಸಿನಿಮಾ ಕೊಂಚ ಉದ್ದವಾಯ್ತು ಎಂದು ಕೆಲವರು ಹೇಳಿದ್ದಾರೆ, ಮತ್ತೆ ಕೆಲವರು ಇಂಥ ಕತೆ ಹೇಳುವಾಗ ಸಿನಿಮಾ ದೀರ್ಘವಾಗೋದು ಸಹಜ ಎಂದು ಸಮಜಾಯಿಷಿ ನೀಡಿದ್ದಾರೆ. ಕಾಮಿಡಿ ಪಂಚ್, ರಕ್ಷಿತ್ ಶೆಟ್ಟಿ ಮ್ಯಾನರಿಸಂ, ಫೈಟಿಂಗ್ ಎಲ್ಲವೂ ಪಕ್ಕಾ ಮನರಂಜನೆ ಒದಗಿಸುತ್ತದೆ ಎಂದು ಸಿನಿಮಾ ನೋಡಿದ ಹಲವರು ಅಭಿಪ್ರಾಯಪಟ್ಟಿದ್ದಾರೆ.
ನೋಡುಗರ ಮನ ಗೆದ್ದ ‘ಅವನೇ ಶ್ರೀಮನ್ನಾರಾಯಣ’
Follow Us