ಮುಂಬೈ: ದಯಮಾಡಿ ಕೊರೋನಾ ಪರೀಕ್ಷೆ ನಡೆಸಿ.. ನಿಮ್ಮ ಆರೋಗ್ಯದ ಬಗ್ಗೆ ಸಾವಿರಾರು ಮಂದಿ ಚಿಂತಿತರಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಬೇಡವಾದರೆ ನೀವು ಇಚ್ಚಿಸಿದ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದರೆ ಉತ್ತಮ. ಇದು ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ಅವರು ಚಿತ್ರನಟಿ ರೇಖಾ ಅವರಿಗೆ ಮಾಡಿರುವ ಮನವಿ
ರೇಖಾ ಅವರ ಮನೆಯ ಕಾವಲುಗಾರನಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುಂಬೈ ಮೇಯರ್ ಈ ಮನವಿ ಮಾಡಿದ್ದಾರೆ.ರೇಖಾ ಅವರು ಇದುವರೆಗೂ ಕೊರೋನಾ ಪರೀಕ್ಷೆ ನಡೆಸಿಲ್ಲ. ಕೊರೋನಾ ಹಿಂದಿ ಚಿತ್ರರಂಗದ ಮೇಲೂ ದಾಳಿ ನಡೆಸಿದೆ.
ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಮುಂಬೈಯ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.