Newsics.com
ಹೈದರಾಬಾದ್: ಮಲೆಯಾಳಿ ಕುಟ್ಟಿ ನಮಿತಾ ಪ್ರಮೋದ್ ಮಲೆಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ತಮಿಳುನಲ್ಲಿಯೂ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಮಲೆಯಾಳಂ ಚಿತ್ರ ಟ್ರಾಫಿಕ್ ಅವರ ಚೊಚ್ಚಲ ಚಿತ್ರ. ಬಳಿಕ ಕಣ್ಣು ಹಾಯಿಸಿದ್ದು ನೆರೆಯ ರಾಜ್ಯಗಳ ಚಿತ್ರಗಳತ್ತ. ಆದರೂ ಕನ್ನಡದಲ್ಲಿ ಇದುವರೆಗೆ ಹೇಳಿಕೊಳ್ಳುವ ಅವಕಾಶ ನಮಿತಾ ಅವರಿಗೆ ದೊರೆತಿಲ್ಲ.
2021ರಲ್ಲಿ ಕನ್ನಡ ಚಿತ್ರರಂಗ ತಮ್ಮನ್ನು ಸ್ವಾಗತಿಸಲಿದೆ ಎಂಬ ಆಶಾವಾದ ಅವರಲ್ಲಿದೆ.. ಕನ್ನಡ ಚಿತ್ರಗಳಲ್ಲಿ ಅಭಿನಯಿಸುವುದನ್ನು ಎದುರು ನೋಡುತ್ತಿದ್ದಾರೆ.