ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ನಡುವಣ ಪ್ರೇಮ ಈಗೇನೂ ಗುಟ್ಟಾಗಿ ಉಳಿದಿಲ್ಲ. ಒಂದೂವರೆ ವರ್ಷಗಳ ಹಿಂದೆ ಬರೀ ಗಾಸಿಪ್ ರೂಪದಲ್ಲಿದ್ದ ಇವರಿಬ್ಬರ ಪ್ರೀತಿ ಬಳಿಕ ಹೊರಜಗತ್ತಿಗೆ ಅಧಿಕೃತವಾಗಿಯೇ ಗೊತ್ತಾಗಿತ್ತು. ಗೊತ್ತಾಗಿದ್ದು ಎನ್ನುವುದಕ್ಕಿಂತಲೂ ಇವರೇ ಗೊತ್ತು ಮಾಡಿದ್ದರು. ಹಲವು ಪ್ರಮುಖ ಸಂದರ್ಭದಲ್ಲಿ ನಯನತಾರಾ ಮತ್ತು ವಿಘ್ನೇಶ್ ಜತೆಜತೆಯಾಗಿಯೇ ಕಾಣಿಸಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದರು. ಅಲ್ಲದೆ, ತಮ್ಮಿಬ್ಬರ ಫೋಟೋಗಳನ್ನು ಇವರೇ ತಮ್ಮ ಸಾಮಾಜಿಕ ಮಾಧ್ಯಮದಲ್ಲೂ ಹಂಚಿಕೊಳ್ಳುತ್ತಿದ್ದರು.
ಸದ್ಯ ಇವರಿಬ್ಬರ ಮದುವೆ ನಡೆಯುವುದೊಂದೇ ಬಾಕಿ ಇದೆ. ಶೀಘ್ರದಲ್ಲಿ ಇವರಿಬ್ಬರು ದಾಂಪತ್ಯಕ್ಕೂ ಕಾಲಿಡಲಿದ್ದಾರೆ. ಇಂತಹ ಪ್ರೇಮಜೋಡಿ ಮತ್ತೊಂದು ಸಲ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಕನ್ಯಾಕುಮಾರಿಯ ಭಗವತಿ ಅಮ್ಮ ದೇವಸ್ಥಾನಕ್ಕೆ ಬಂದಿದ್ದ ನಯನತಾರಾ ಮತ್ತು ವಿಘ್ನೇಶ್ ಒಟ್ಟಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸುಮಾರು ಒಂದು ಗಂಟೆಗೂ ಅಧಿಕ ಕಾಲ ಇವರಿಬ್ಬರು ದೇವಸ್ಥಾನದಲ್ಲಿ ಕಾಲ ಕಳೆದಿದ್ದರು. ಸದ್ಯ ನಯನತಾರಾ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ದರ್ಬಾರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರೊಂದಿಗೆ `ಮೂಕುತ್ತಿ ಅಮ್ಮನ್’ ಎಂಬ ಚಿತ್ರದಲ್ಲೂ ನಯನ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದೇವಿಯ ಪಾತ್ರವನ್ನು ನಯನಾ ನಿರ್ವಹಿಸುತ್ತಿದ್ದು, ಇಡೀ ಶೂಟಿಂಗ್ ಮುಗಿಯುವವರೆಗೆ ಸಸ್ಯಾಹಾರವನ್ನಷ್ಟೇ ಸೇವಿಸುತ್ತಿದ್ದಾರೆ.
ಪ್ರಿಯಕರನೊಂದಿಗೆ ಕನ್ಯಾಕುಮಾರಿಯಲ್ಲಿ ನಯನತಾರಾ ಪೂಜೆ
Follow Us